ಬಾ ಲಿವುಡ್ನಲ್ಲಿ ನಟರ ಫಿಟ್ನೆಸ್ ಕುರಿತು ಆಗಾಗ ಚರ್ಚೆ ನಡೆಯುವುದು ಮಾಮೂಲಿ, ಐಸ್ ಬಕೆಟ್ ಚಾಲೆಂಜ್ನಿಂದ ಹಿಡಿದು ಸಾಮಾಜಿಕ ಜಾಲತಾಣದ ಸಾಕಷ್ಟು ಕುತೂಹಲ ಚರ್ಚೆಗಳಲ್ಲಿ ‘ಬಿ ಟೌನ್’ ನ ಹಾಜರಿ ಇದ್ದೇ ಇರುತ್ತದೆ.

ಈಗ ಇನ್ಸ್ಟಾಗ್ರಾಂನಲ್ಲಿ ‘ಬಾಟಲ್ ಕ್ಯಾಪ್ ಚಾಲೆಂಜ್’ ಆರಂಭಗೊಂಡಿದೆ. ಇತ್ತೀಚೆಗೆ ನಟ ಡೀನೊ ಮೋರಿಯಾ ಹಂಚಿಕೊಂಡಿರುವ ವಿಡಿಯೋ ಸಾಕಷ್ಟು ಟ್ರೆಂಡ್ ಕ್ರಿಯೇಟ್ ಮಾಡಿದೆ ಅಲ್ಲದೇ ಈ ಚಾಲೆಂಜ್ನಲ್ಲಿ ಭಾಗವಹಿಸಲು ಬಾಲಿವುಡ್ ನಟರು ಉತ್ಸಾಹ ತೋರಿಸುತ್ತಿದ್ದಾರೆ.

ಟೇಬಲ್ ಮೇಲೊಂದರಲ್ಲಿ ಇಟ್ಟಿರುವ ಬಾಟಲ್ ಮೇಲಿನ ಕ್ಯಾಪ್ ಅನ್ನು ಕಾಲಿನಿಂದ ತಿರುಗಿಸುವ ಡೀನೊ ಮೋರಿಯಾ ಅವರ ವಿಡಿಯೋವನ್ನು 1 ಲಕ್ಷಕ್ಕಿಂತ ಹೆಚ್ಚು ಜನರು ನೋಡಿದ್ದಾರೆ. ‘ಅಕ್ಷಯ್ ಕುಮಾರ್ ಇದನ್ನು ಪ್ರಯತ್ನಿಸಿದರೆ ನಾನೂ ಭಾಗವಹಿಸಲೇಬೇಕು. ಇವರು ನನ್ನ ಫೇವರೇಟ್ ಆ್ಯಕ್ಷನ್ ಹೀರೊ, ನಾನು ಬಾಟಲ್ ಮೇಲಿನ ಕ್ಯಾಪ್ ತಿರುಗಿಸಿದ್ದೇನೆ. ಈಗ ಟೈಗರ್ ಶ್ರಾಫ್ ಹಾಗೂ ವರುಣ್ ಧವನ್ ಸರದಿ. ಟ್ರೈ ಮಾಡಿ’ ಎಂದು ಬರೆದಿದ್ದಾರೆ. ತಮ್ಮ ನಂತರದ ಚಾಲೆಂಜ್ಗೆ ಇಬ್ಬರು ಫಿಟ್ ನಟರನ್ನು ಅವರು ಆಯ್ಕೆ ಮಾಡಿದ್ದಾರೆ.

ಕರಾಟೆ ಪಟುವಾಗಿರುವ ನಟ ಅರ್ಜುನ್ ಸರ್ಜಾ ಬಾಟಲ್ ಮೇಲಿನ ಕ್ಯಾಪ್ ಕಾಲಿನಿಂದ ಒದ್ದು ಬೀಳಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.