ಸ್ಯಾಂಡಲ್ವುಡ್ನ ‘ಕೃಷ್ಮಿ’ ಅಂದರೆ, ‘ಲವ್ ಮಾಕ್ಟೆಲ್’ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ತಾರಾ ಜೋಡಿಯ ಮದುವೆ ಸದ್ಯದಲ್ಲೇ ಇರುವುದು ಸಿನಿಪ್ರಿಯರಿಗೆ ಗೊತ್ತೇ ಇರುವ ಸಂಗತಿ. ಬಹುಕಾಲದಿಂದ ಪ್ರೀತಿಸುತ್ತಿರುವ ಈ ಜೋಡಿ 2021ರ ಫೆಬ್ರುವರಿ 14ರಂದು ಅಂದರೆ, ಪ್ರೇಮಿಗಳ ದಿನದಂದು ಹಸೆಮಣೆಗೆ ಏರಲಿದ್ದು, ಇತ್ತೀಚೆಗಷ್ಟೇ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದೆ. ವಿವಾಹ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಿಲನಾ ಗೆಳತಿಯರು ಬೆಂಗಳೂರಿನ ಹೋಟೆಲ್ವೊಂದಲ್ಲಿ ‘ಕೃಷ್ಮಿ’ಗೆ ಅದ್ಧೂರಿಯಾಗಿ ಬ್ಯಾಚುಲರ್ ಪಾರ್ಟಿ ನೀಡಿ ಖುಷಿಪಡಿಸಿದ್ದಾರೆ.

ಬ್ಯಾಚುಲರ್ ಪಾರ್ಟಿಯಲ್ಲಿ ತಿಳಿ ಆಕಾಶ ನೀಲಿ ಬಣ್ಣದ ಗೌನ್ ಧರಿಸಿ, ತಮ್ಮ ಗೆಳತಿಯರೊಂದಿಗೆ ರ್ಯಾಂಪ್ ವಾಕ್ ಮಾಡಿ ಮಿಂಚಿರುವ ಮಿಲನಾ ಫೋಟೊಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ‘ಬ್ಯಾಚಿಲ್ಲೋರೆಟ್! ಅನ್ನು ತುಂಬಾ ಸ್ಮರಣೀಯವಾಗಿಸಿದ್ದಕ್ಕಾಗಿ ಗೆಳತಿಯಗೆ ಧನ್ಯವಾದಗಳು’ ಎಂದು ಟ್ವೀಟ್ ಮಾಡಿದ್ದಾರೆ.

ಮಿಲನಾ ಜತೆಗೆ ಪಾರ್ಟಿಯಲ್ಲಿ ಭಾಗಿಯಾಗಿದ್ದ ಡಾರ್ಲಿಂಗ್ ಕೃಷ್ಣ, ತಮ್ಮ ಭಾವಿ ಪತ್ನಿ ಜತೆಗಿರುವ ಚೆಂದನೆಯ ಫೋಟೊ ಅನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.