ಕಿಶನ್ ಪ್ರೊಡಕ್ಷನ್ ಲಾಂಛನದಲ್ಲಿ ಪ್ರಕಾಶ್ ನಿರ್ಮಾಣ ಮಾಡುತ್ತಿರುವ ‘ಶಭಾಷ್ ಬಡ್ಡಿಮಗ್ನೆ’ ಚಿತ್ರದ ಚಿತ್ರೀಕರಣವು ಬಹುತೇಕ ಮುಕ್ತಾಯದ ಹಂತದಲ್ಲಿದೆ. ಮೂಡಿಗೆರೆಯ ಕೊಟ್ಟಿಗೆಹಾರ, ಬಾಳೂರು, ಕೊಡಿಗೆ ಜಲಪಾತ ಹಾಗೂ ಸುತ್ತಮತ್ತಲಿನ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ. ಇದೇ ವೇಳೆ ಡಬ್ಬಿಂಗ್ ಕೂಡಾ ನಡೆದಿದೆ.

ಬಿ.ಎಸ್.ರಾಜಶೇಖರ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಪ್ರಧಾನ ನಿರ್ದೇಶನವಿದೆ. ಹರೀಶ್ ಸಾರಾ ಅವರ ಸಹ ನಿರ್ದೇಶನವಿದೆ. ಪ್ರಮೋದ್ಶೆಟ್ಟಿ ತನ್ನ ವಿಭಿನ್ನ ರೀತಿಯ ವರ್ತನೆಯಿಂದಾಗಿ ಶಭಾಷ್ ಬಡ್ಡಿಮಗ್ನೆ ಅನಿಸಿಕೊಂಡರೆ, ಸಂಗಾತಿಯಾಗಿ ಪ್ರಿಯಾ ಕಾಣಿಸಿಕೊಳ್ಳುತ್ತಿದ್ದಾರೆ. ಅನ್ಲೈನ್ ಸ್ಟಾರ್ ಸಾಮ್ರಾಟ್ಶೆಟ್ಟಿ ಹಾಗೂ ಕಾವ್ಯಶ್ರೀ ಈ ಚಿತ್ರದಲ್ಲಿರುವ ಮತ್ತೊಂದು ಯುವ ಜೋಡಿ.

ತಾರಾಣದಲ್ಲಿ ಶಂಕರ್ಅಶ್ವಥ್, ರವಿತೇಜ, ಮಿತ್ರ, ಪ್ರಕಾಶ್ ತೂಮಿನಾಡು, ರಮೇಶ್ ರೈ ಕುಕ್ಕವಳ್ಳಿ, ಈಶ್ವರ್ಶೆಟ್ಟಿ, ಮೂಗುಸುರೇಶ್, ಶೋಭಶೆಟ್ಟಿ, ಸುಧಾ, ಸವಿತ, ಗೀತಾವಸಂತ್, ಮಮತಾರಾಜಶೇಖರ್ ಮುಂತಾದವರ ದೊಡ್ಡ ತಂಡವೇ ಇರಲಿದೆ. ಎಸ್.ಪಿ.ಭೂಪತಿ ಚಿತ್ರದ ನಾಲ್ಕು ಹಾಡುಗಳಿಗೆ ರಾಗ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಅಣಜಿನಾಗರಾಜ್, ಎರಡು ಹಾಡುಗಳಿಗೆ ಕವಿರಾಜ್ ಸಾಹಿತ್ಯ ಬರೆದುಕೊಟ್ಟಿದ್ದಾರೆ. ಮುಂದಿನ ವರ್ಷ ಫೆಬ್ರುವರಿ ವೇಳೆಗೆ ಚಿತ್ರ ತೆರೆ ಕಾಣಲಿದೆ ಎಂದಿದೆ ಚಿತ್ರತಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.