ಬುಧವಾರ, ಮಾರ್ಚ್ 29, 2023
26 °C

‘ಬೆಂಗಳೂರು 69’ ಯೂರೋಪ್‌ನ ತಾರೆಯೂ.. ಮರುಭೂಮಿಯ ಚಿತ್ರೀಕರಣವೂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಬೆಂಗಳೂರು 69’ ಚಿತ್ರ ಟ್ರೈಲರ್‌ ಮೂಲಕ ಸದ್ದು ಮಾಡಿರುವುದು ಗೊತ್ತಿದೆ. ಈ ಚಿತ್ರದಲ್ಲಿ ಯುರೋಪ್‌ನ ತಾರೆ ಗ್ರೇಸಿಲಾ ಪಿಶ್ನರ್ ನಟಿಸುತ್ತಿದ್ದಾರೆ. 

ಝಾಕಿರ್ ಹುಸೈನ್ ಕರೀಂಖಾನ್ ಹಾಗೂ ದುಬೈ ಮೂಲದ ಕನ್ನಡಿಗರಾದ ಗುಲ್ಜಾರ್ ದಂಪತಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಕ್ರಾಂತಿ ಚೈತನ್ಯ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಹೊಸದೊಂದು ಕ್ರೈಮ್ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ. ‘ಟಗರು’ ಖ್ಯಾತಿಯ ಅನಿತಾ ಭಟ್ ನಾಯಕಿ. ಪವನ್ ಶೆಟ್ಟಿ ಹಾಗೂ ತೆಲುಗಿನ ನಟ ‘ಛತ್ರಪತಿ’ ಶಫಿ ನಾಯಕರಾಗಿದ್ದಾರೆ.

ಗ್ರೇಸಿಲ್‌ ಅಭಿನಯದ ದೃಶ್ಯಗಳನ್ನು ಮರುಭೂಮಿಯಲ್ಲಿ ಚಿತ್ರೀಕರಿಸಲಾಗಿದೆ. 

ಬೆಂಗಳೂರು 69' ಇದೊಂದು ಕ್ರೈಮ್ ಥ್ರಿಲ್ಲರ್ ಜಾನರ್ ಚಿತ್ರವಾಗಿದ್ದು... ಚಿತ್ರಕ್ಕೆ  ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಚಿತ್ರ ಶೀಘ್ರ ಬಿಡುಗಡೆಯಾಗಲಿದೆ ಎಂದಿದೆ ಚಿತ್ರತಂಡ.

ಚಿತ್ರಕ್ಕೆ ಪರಮೇಶ್ ಅವರ ಛಾಯಾಗ್ರಹಣವಿದೆ. ವಿಕ್ರಮ್ ಹಾಗೂ ಚಂದನಾ ಸಂಗೀತ, ಅಕ್ಷಯ್ ಪಿ. ರಾವ್ ಸಂಕಲನವಿದೆ. ಪಿ. ಎನ್. ವೈ. ಪ್ರಸಾದ್ ಹಾಗೂ ಜಯದೇವ್ ಮೋಹನ್ ಸಂಭಾಷಣೆ ಬರೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು