ಬೆಂಗಳೂರು: ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಸಮಾಧಿ ಮುಂದೆಯೇ ಮದುವೆ ಆಗಬೇಕು ಎಂದು ಜೋಡಿಯೊಂದು ನಿರ್ಧರಿಸಿ ಕಂಠೀರವ ಸ್ಟುಡಿಯೋಕ್ಕೆ ಶನಿವಾರ ಆಗಮಿಸಿದೆ.

ಬಳ್ಳಾರಿಯವರಾದ ಗಂಗಾ ಮತ್ತು ಗುರು ಪ್ರಸಾದ್ ಅವರೇ ಸಮಾಧಿ ಮುಂದೆ ಮದುವೆಯಾಗಲು ನಿರ್ಧರಿಸಿರುವ ಪ್ರೇಮಿಗಳು.

ಈ ಕುರಿತು ಪ್ರತಿಕ್ರಿಯಿಸಿದ ಗುರುಪ್ರಸಾದ್, ‘ಪುನೀತ್ ಎಂದರೆ ನಮಗೆ ತುಂಬಾ ಅಭಿಮಾನ. ನಾವು ಮದುವೆಯಾಗುತ್ತಿರುವುದು ನಮ್ಮ ಕುಟುಂಬದವರಿಗೂ ಗೊತ್ತಿದೆ. ಪುನೀತ್ ಬದುಕಿದಿದ್ದರೆ ಮದುವೆ ಬಳಿಕ ಅವರ ಮನೆಗೆ ತೆರಳಿ ಆಶೀರ್ವಾದ ಪಡೆದುಕೊಳ್ಳಬೇಕು ಎಂದುಕೊಂಡಿದ್ದೆವು. ಆದರೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಅವರ ಸಮಾಧಿ ಎದುರು ಮದುವೆ ಆಗುತ್ತೇವೆ. ಪುನೀತ್ ಸಹೋದರರಾದ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಅವರನ್ನು ಸಂಪರ್ಕಿಸಿದ್ದೇವೆ. ಅವರೂ ಒಪ್ಪಿಗೆ ಕೊಟ್ಟಿದ್ದಾರೆ’ ಹಾಗಾಗಿ ಸಮಾಧಿ ಮುಂದೆಯೇ ಮದುವೆಯಾಗುತ್ತಿದ್ದೇವೆ’ ಎಂದರು.

‘ಪುನೀತ್ ಅವರ ಸಮಾಜ ಸೇವೆ ನೋಡಿದರೆ ಅವರಿಗಿಂತ ದೊಡ್ಡ ದೇವರು ಯಾರೂ ಇಲ್ಲ ಎನಿಸುತ್ತದೆ’ ಎಂದರು ಗಂಗಾ.

ಆದರೆ ಪೊಲೀಸರು ಈ ಮದುವೆಗೆ ಒಪ್ಪಿಗೆ ನೀಡಲಿಲ್ಲ. ಹಾಗಾಗಿ ಈ ಜೋಡಿ ವಾಪಸಾಗಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.