ಭಾನುವಾರ, ಫೆಬ್ರವರಿ 23, 2020
19 °C
ಫಿಲ್ಮ್‌ ಕ್ರಿಟಿಕ್ಸ್‌ ಅಕಾಡೆಮಿ ಪ್ರಶಸ್ತಿ

ಜಗ್ಗೇಶ್‌ಗೆ ‘ಅತ್ಯುತ್ತಮ ನಟ’ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 'ಚಂದನವನ ಫಿಲ್ಮ್‌ ಕ್ರಿಟಿಕ್ಸ್ ಅಕಾಡೆಮಿ'ಯ ಮೊದಲ ವರ್ಷದ (2019ನೇ ಸಾಲಿನ ಚಿತ್ರಗಳಿಗೆ) ಸಿನಿಮಾ ಪ್ರಶಸ್ತಿಗಳು ಪ್ರಕಟವಾಗಿವೆ. ರಮೇಶ್ ಇಂದಿರಾ ನಿರ್ದೇಶನದ 'ಪ್ರೀಮಿಯರ್ ಪದ್ಮಿನಿ' ಚಿತ್ರವು 'ಅತ್ಯುತ್ತಮ ಸಿನಿಮಾ' ಪ್ರಶಸ್ತಿ ಪಡೆದುಕೊಂಡಿದೆ. ಅತ್ಯುತ್ತಮ ನಟ ಪ್ರಶಸ್ತಿಗೆ ಜಗ್ಗೇಶ್ (ಪ್ರೀಮಿಯರ್ ಪದ್ಮಿನಿ ಚಿತ್ರದ ಅಭಿನಯ), ಅತ್ಯುತ್ತಮ ನಟಿ ಪ್ರಶಸ್ತಿಗೆ ಅದಿತಿ ಪ್ರಭುದೇವ (ರಂಗನಾಯಕಿ ಚಿತ್ರದ ನಟನೆ) ಆಯ್ಕೆಯಾಗಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇತರ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆಗೆ ಪ್ರಶಸ್ತಿ ಪಡೆದವರ ವಿವರ:

ಕಲಾ ನಿರ್ದೇಶನ: ಉಲ್ಲಾಸ್ (ಅವನೇ ಶ್ರೀಮನ್ನಾರಾಯಣ), ವಿಎಫ್‌ಎಕ್ಸ್‌: ಅವನೇ ಶ್ರೀಮನ್ನಾರಾಯಣ, ಸಾಹಸ: ಅವನೇ ಶ್ರೀಮನ್ನಾರಾಯಣ, ನೃತ್ಯ ನಿರ್ದೇಶನ: ಇಮ್ರಾನ್ ಸರ್ದಾರಿಯಾ (ಅವನೇ ಶ್ರೀಮನ್ನಾರಾಯಣ), ಸಂಕಲನ: ರಾಜೇಂದ್ರ ಅರಸ್ (ಪ್ರೀಮಿಯರ್ ಪದ್ಮಿನಿ), ಗೀತ ಸಾಹಿತ್ಯ: ಪ್ರಮೋದ್ ಮರವಂತೆ (ಮುಂದಿನ ನಿಲ್ದಾಣ), ಗಾಯಕಿ: ಅದಿತಿ ಸಾಗರ್ (ಕವಲುದಾರಿ), ಗಾಯಕ: ಕಡಬಗೆರೆ ಮುನಿರಾಜು (ಬೆಲ್ ಬಾಟಮ್), ಛಾಯಾಗ್ರಹಣ: ಕರಂ ಚಾವ್ಲಾ (ಅವನೇ ಶ್ರೀಮನ್ನಾರಾಯಣ), ಸಂಭಾಷಣೆ: ಕವಿರಾಜ್ (ಕಾಳಿದಾಸ ಕನ್ನಡ ಮೇಷ್ಟ್ರು).

ಹಿನ್ನೆಲೆ ಸಂಗೀತ: ಅಜನೀಶ್ ಲೋಕನಾಥ್ (ಅವನೇ ಶ್ರೀಮನ್ನಾರಾಯಣ), ಸಂಗೀತ: ಅಜನೀಶ್ ಲೋಕನಾಥ್ (ಬೆಲ್ ಬಾಟಮ್), ಬಾಲ ಕಲಾವಿದೆ: ಐಶ್ವರ್ಯಾ ಉಪೇಂದ್ರ (ದೇವಕಿ), ಪೋಷಕ ನಟಿ: ಸೋನು ಗೌಡ (ಐ ಲವ್ ಯು) ಮತ್ತು ಭಾಗೀರಥಿಬಾಯಿ (ಮಿಸ್ಸಿಂಗ್ ಬಾಯ್), ಪೋಷಕ ನಟ: ಅನಂತನಾಗ್ (ಕವಲುದಾರಿ), ಚಿತ್ರಕಥೆ: ಜಯತೀರ್ಥ (ಬೆಲ್ ಬಾಟಮ್).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು