ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿರ್ಮಾಣವಾಗಲಿದೆ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಜೀವನಾಧಾರಿತ ಚಿತ್ರ!

Published 20 ಆಗಸ್ಟ್ 2024, 5:11 IST
Last Updated 20 ಆಗಸ್ಟ್ 2024, 5:14 IST
ಅಕ್ಷರ ಗಾತ್ರ

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ಜೀವನಗಾಥೆಯು ಚಲನಚಿತ್ರವಾಗಲಿದೆ. 

ಭೂಷಣ್‌ ಕುಮಾರ್ ಅವರ ಟಿ ಸಿರೀಸ್ ಸಂಸ್ಥೆ ಮತ್ತು ರವಿ ಭಾಗಚಂದಕಾ ಅವರ ಸಹನಿರ್ಮಾಣದಲ್ಲಿ ಈ ಬಯೋಪಿಕ್ ನಿರ್ಮಾಣವಾಗಲಿದೆ. ಇದೇ ಸಂಸ್ಥೆಯು ‘ಸಚಿನ್; ಎ ಬಿಲಿಯನ್ ಡ್ರೀಮ್ಸ್’ ಮತ್ತು ಮುಂಬರಲಿರುವ ಆಮೀರ್ ಖಾನ್ ನಟನೆಯ ‘ಸಿತಾರೆ ಝಮೀನ್ ಪರ್’ ಚಿತ್ರ ನಿರ್ಮಾಣ ಮಾಡಿದೆ. 

‘ಯುವರಾಜ್ ಸಿಂಗ್ ಅವರು ತಮ್ಮ 13ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದ್ದರು. ಪಂಜಾಬ್‌ ರಾಜ್ಯದ ಎಡಗೈ ಆಲ್‌ರೌಂಡರ್ ಯುವಿ,  2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಭಾರತವು ಪ್ರಶಸ್ತಿ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.  ಆದರೆ ಕ್ಯಾನ್ಸರ್‌ ಅವರನ್ನು ಕಾಡಿತ್ತು. ಆದರೂ ಛಲಬಿಡದೇ ಹೋರಾಡಿ ಗುಣಮುಖರಾಗಿದ್ದ ಅವರು 2012ರಲ್ಲಿ ಮತ್ತೆ ಕ್ರಿಕೆಟ್‌ಗೆ ಮರಳಿದ್ದರು. ಅವರ ದಿಟ್ಟತನದ ಜೀವನವು ಯುವಜನತೆಗೆ ಸ್ಫೂರ್ತಿಯಾಗಲಿದೆ‘ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಕುಮಾರ್ ಅವರ ನಿರ್ಮಾಣದಲ್ಲಿ ದೃಶ್ಯಂ 2, ಎನಿಮಲ್, ಭೂಲ್‌ ಭೂಲಯ್ಯಾ 2, ಕಬೀರ್ ಸಿಂಗ್ ಮತ್ತು ತಾನಾಜಿ; ದ ಅನ್‌ಸಂಗ್ ವಾರಿಯರ್ಸ್ ಚಿತ್ರಗಳು ಪ್ರಮುಖವಾಗಿವೆ.‌

‘ಲಕ್ಷಾಂತರ ಜನರಿಗೆ ನನ್ನ ಜೀವನಗಾಥೆಯನ್ನು ಸಿನಿಮಾದ ಮೂಲಕ ತಲುಪಿಸುತ್ತಿರುವುದು ಸಂತಸ ತಂದಿದೆ. ಭೂಷಣ್ ಮತ್ತು ರವಿ ಅವರ ಕ್ರಿಕೆಟ್ ಪ್ರೀತಿ ಶ್ಲಾಘನೀಯ’ ಎಂದು ಯುವಿ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT