ಟ್ರೇಲರ್ ಬಿಡುಗಡೆ
ಚಿನ್ನದ ಬಿಸ್ಕತ್ ಮಾರಲು ಹೊರಟ ನಾಲ್ವರು ಹುಡುಗರ ಕಥೆ ಹೊಂದಿರುವ ‘ಮಾರಿಗೋಲ್ಡ್’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ರಾಘವೇಂದ್ರ ಎಂ.ನಾಯ್ಕ್ ನಿರ್ದೇಶನದ ಚಿತ್ರಕ್ಕೆ ರಘುವರ್ಧನ್ ಬಂಡವಾಳ ಹೂಡಿದ್ದಾರೆ. ಚಿನ್ನದ ಬಿಸ್ಕತ್ತಿನ ಹಿಂದೆ ಬಿದ್ದ ನಾಲ್ವರಲ್ಲಿ ಮಾರಿಗೋಲ್ಡ್ ಯಾರ ಪಾಲಾಗುತ್ತದೆ ಎಂಬುದೇ ಚಿತ್ರಕಥೆ ಎಂದು ಮೇಲ್ನೊಟಕ್ಕೆ ತಿಳಿಯುತ್ತಿದೆ. ಆ್ಯಕ್ಷನ್, ಥ್ರಿಲ್ಲರ್ ಕಥಾಹಂದರದ ಚಿತ್ರದಲ್ಲಿ ಯಶ್ ಶೆಟ್ಟಿ, ಕಾಕ್ರೋಚ್ ಸುಧೀ, ಸಂಪತ್ ಮೈತ್ರೇಯಾ ಮೊದಲಾದವರು ನಟಿಸಿದ್ದಾರೆ. ವೀರ್ ಸಮರ್ಥ ಸಂಗೀತ, ರಘು ನಿಡವಳ್ಳಿ ಸಂಭಾಷಣೆ, ಕೆ.ಎಸ್.ಚಂದ್ರಶೇಖರ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.