ಶುಕ್ರವಾರ, ಆಗಸ್ಟ್ 12, 2022
20 °C

ಬಾಕ್ಸ್‌ಆಫೀಸ್‌ ಬಾತ್: ಪ್ರಭಾಸ್‌ ಸಿನಿಮಾವನ್ನೇ ಮೀರಿಸಿದೆ ವಿಜಯ್‌ ಸಿನಿಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯತ್ತಿರುವ ಅಟ್ಲಿ ನಿರ್ದೇಶನದ ಬಿಗಿಲ್‌ ಸಿನಿಮಾ ಗಳಿಕೆಯಲ್ಲಿ ಪ್ರಭಾಸ್‌ ನಟನೆಯ ಬಾಹುಬಲಿ 2 ಅನ್ನೇ ಮೀರಿಸಿದೆ ಎನ್ನುತ್ತಿದೆ ಚಿತ್ರಮಂದಿರ ಸಮೀಕ್ಷೆ.

ಎರಡು ವಾರಗಳನ್ನು ಪೂರೈಸಿ ಯಶಸ್ವಿಯಾಗಿ ಮುಂದುವರಿಯುತ್ತಿರುವ ಬಿಗಿಲ್‌ ಸಿನಿಮಾ 5 ದಿನಗಳಲ್ಲಿಯೇ ₹200 ಕೋಟಿ ಗಳಿಸಿತ್ತು. ಜಗತ್ತಿನಾದ್ಯಂತ ಉತ್ತಮ ಗಳಿಕೆ ಮಾಡುತ್ತಿರುವ ವಿಜಯ್‌ ಅಭಿನಯದ ಬಿಗಿಲ್‌ ಅನೇಕ ದಾಖಲೆಗಳನ್ನು ಮುರಿದಿದೆ.

ಬಿಗಿಲ್‌ vs ಬಾಹುಬಲಿ 2

ಚೆನ್ನೈನಲ್ಲಿ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಗಳಿಕೆಯ ದಾಖಲೆಯನ್ನು ಬಿಗಿಲ್‌ ಮುರಿದಿದೆ. ಬಿಗಿಲ್‌ ಬಿಡುಗಡೆಗೊಂಡ ಮೊದಲ ಮೂರು ದಿನಗಳಲ್ಲಿ 675 ಪ್ರದರ್ಶನಗಳಿಂದ ಬರೋಬ್ಬರಿ ₹5.33 ಕೋಟಿ ಗಳಿಸಿದ್ದರೆ, ಬಾಹುಬಲಿ 2 ಸಿನಿಮಾ 828 ಪ್ರದರ್ಶನಗಳಿಂದ ಕೇವಲ ₹3.24 ಕೋಟಿ ಗಳಿಸಿತ್ತು.

ವಾರದ ದಿನಗಳಲ್ಲಿ 636 ಪ್ರದರ್ಶನಗಳಿಂದ ಬಿಗಿಲ್‌ ₹3.33 ಕೋಟಿ ಬಾಚಿಕೊಂಡಿತು. ಎರಡನೇ ವಾರದಲ್ಲಿ ₹2.03 ಕೋಟಿ ಗಳಿಕೆ ಮಾಡಿದೆ. ಒಟ್ಟು 10 ದಿನಗಳಲ್ಲಿ ಬಿಗಿಲ್‌ ₹10.76 ಕೋಟಿ ಗಳಿಸಿಕೊಂಡಿದೆ. ಆದರೆ, ಬಾಹುಬಲಿ 2 ಸಿನಿಮಾ 10 ದಿನಗಳಲ್ಲಿ ಗಳಿಸಿದ್ದು ₹9.06 ಕೋಟಿ.

ಇನ್ನೂ ಉತ್ತಮ ಪ್ರದರ್ಶನ ಕಾಣುತ್ತಿರುವ ವಿಜಯ್‌, ನಯನಾ ತಾರಾ ಜೋಡಿಯ ಬಿಗಿಲ್‌ ಸಿನಿಮಾಗಿರುವ ಮುಂದಿನ ಸವಾಲೆಂದರೆ, ಬಾಹುಬಲಿ 2 ಚೆನ್ನೈನಲ್ಲಿ ಒಟ್ಟಾರೆಯಾಗಿ ಗಳಿಸಿದ್ದ ಜೀವಮಾನದ ಸಂಗ್ರಹವಾದ ₹18 ಕೋಟಿಯ ದಾಖಲೆಯನ್ನು ಮುರಿಯುವುದು. ಐದು ವಾರಗಳ ವರೆಗೂ ಉತ್ತಮವಾಗಿ ಪ್ರದರ್ಶನ ಕಂಡ ಬಾಹುಬಲಿ 2 ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ದಾಖಲೆ ಬರೆದಿತ್ತು.

ಅಜಿತ್‌ ಅಭಿನಯದ ‘ವಿಶ್ವಾಸಂ’ ಎರಡು ವಾರಗಳ ಗಳಿಕೆ ದಾಖಲೆಯನ್ನು (₹12.54 ಕೋಟಿ) ಬಿಗಿಲ್‌ ಮುರಿಯುವ ನಿರೀಕ್ಷೆ ಜನರಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು