ಖ್ಯಾತ ಬಾಲಿವುಡ್ ನಟ ಅನಿಲ್ ಕಪೂರ್ ಅವರು ಚಿತ್ರರಂಗದಲ್ಲಿ 40 ವರ್ಷ ಪೂರ್ಣಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ನಟ ಅನಿಲ್ ಕಪೂರ್, ‘ನನ್ನನ್ನು ಬೆಳೆಸಿದ ಪ್ರೇಕ್ಷಕರಿಗೆ, ಮಾಧ್ಯಮದವರಿಗೆ, ಸ್ನೇಹಿತರಿಗೆ, ಸಹ ಕಲಾವಿದರಿಗೆ ನಿರ್ದೇಶಕರಿಗೆ ನಾನು ಚಿರಋಣಿಯಾಗಿರುತ್ತೇನೆ. ಈ ಸಿನಿಮಾ ಪಯಣ ನನ್ನ ಜೀವನದ ಅದ್ಭುತ ಅನುಭವ ಎಂದಿದ್ದಾರೆ.

'ನಾನು ಇಷ್ಟೊಂದು ಸಿನಿಮಾಗಳನ್ನು ಮಾಡುತ್ತೇನೆ. ನೀವು ಎಲ್ಲರೂ ಇಷ್ಟು ಸಹಕಾರ ನೀಡುತ್ತೀರಾ ಎಂದುಕೊಂಡಿರಲಿಲ್ಲ. ಇದು ನನ್ನ ಪಯಣ ಮಾತ್ರಲ್ಲ. ಇದು ಪ್ರೇಕ್ಷಕರ ಪಯಣವೂ ಆಗಿದೆ. ಪ್ರೇಕ್ಷಕರಿಗಾಗಿ ಇನ್ನು ಹೆಚ್ಚು ಕೆಲಸ ಮಾಡಬೇಕು. ಒಮ್ಮೆ ಹಿಂತಿರುಗಿ ನೋಡಿದರೆ ನನ್ನ ಪಯಣದ ಬಗ್ಗೆ ಹೆಮ್ಮೆ ಆಗುತ್ತದೆ’ ಎಂದು ಬರೆದುಕೊಂಡಿದ್ದಾರೆ.
.ವಿವಾಹ ಸಂಭ್ರಮದಲ್ಲಿ ‘ಗತ ವೈಭವ’ದ ನಟ ದುಷ್ಯಂತ್: ಚಿತ್ರಗಳಲ್ಲಿ ನೋಡಿ.
ಬಾಲಿವುಡ್ ಮಾತ್ರವಲ್ಲದೇ ಕನ್ನಡದ ‘ಪಲ್ಲವಿ ಅನು ಪಲ್ಲವಿ’ ಚಿತ್ರದಲ್ಲಿ ನಟಿಸಿ ಕನ್ನಡಿಗರ ಗಮನ ಸೆಳೆದಿದ್ದಾರೆ. ಹಿಂದಿಯ ‘ವೆಲ್ಕಮ್’, ‘ರಾಮ್ ಲಖನ್’, ‘ಮಿಸ್ಟರ್ ಇಂಡಿಯಾ’, ‘ನಾಯಕ್’, ‘ತೇಜಾಬ್’, ‘ತಾಲ್‘ ಹಾಗೂ ‘ದಿಲ್ ಧಡಕ್ನೆ ದೋ’ ಚಿತ್ರಗಳಲ್ಲಿ ನಟಿಸಿದ್ದಾರೆ.

ಸದ್ಯ, ಅನಿಲ್ ಕಪೂರ್ ಅವರು ‘ಸುಬೇದರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವು ಮಾರ್ಚ್. 5ರಂದು ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.