ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ ನಟ ರಣದೀಪ್ ಹೂಡಾ- ನಟಿ ಲಿನ್ ಲೈಶ್ರಾಮ್ ಮದುವೆ ನ.29ಕ್ಕೆ

Published 25 ನವೆಂಬರ್ 2023, 13:32 IST
Last Updated 25 ನವೆಂಬರ್ 2023, 13:32 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟ ರಣದೀಪ್ ಹೂಡಾ ಅವರು ತಮ್ಮ ಬಹುಕಾಲದ ಗೆಳತಿ ಹಾಗೂ ನಟಿ ಲಿನ್ ಲೈಶ್ರಾಮ್ ಅವರನ್ನು ನವೆಂಬರ್‌ 29ರಂದು ಮಣಿಪುರದಲ್ಲಿ ವರಿಸಲಿದ್ದಾರೆ.

ಈ ಜೋಡಿ ತಮ್ಮ ಮದುವೆ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಮದುವೆಯ ಕಾರ್ಯಕ್ರಮಗಳು ಮಣಿಪುರದ ಇಂಫಾಲದಲ್ಲಿ ನಡೆಯಲಿವೆ. ಆರತಕ್ಷತೆ ಸಮಾರಂಭ ಮುಂಬೈನಲ್ಲಿ ಜರುಗಲಿದೆ.

‘ಪುರಾಣದ ಪ್ರಕಾರ ಮಹಾಭಾರತದ ಅರ್ಜುನ ಮಣಿಪುರದ ರಾಜಕುಮಾರಿ ಚಿತ್ರಾಂಗದೆಯನ್ನು ವರೆಸಿದ್ದರು. ಕುಟುಂಬ ಹಾಗೂ ಹಿರಿಯರ ಆಶೀರ್ವಾದದೊಂದಿಗೆ ಸಾಂಪ್ರದಾಯ ಪ್ರಕಾರ ನಾವು ಮಣಿಪುರಲ್ಲಿ ಮದುವೆಯಾಗುತ್ತಿದ್ದೇವೆ‘ ಎಂದು ತಿಳಿಸಿದ್ದಾರೆ.

‘ನಮ್ಮ ಈ ಹೊಸ ಜೀವನ ಪಯಣಕ್ಕೆ ನಿಮ್ಮ ಪ್ರೀತಿ ಹಾಗೂ ಆಶೀರ್ವಾದ ಸದಾ ಇರಲಿ‘ ಎಂದು ಅಭಿಮಾನಿಗಳನ್ನು ಕೋರಿದ್ದಾರೆ.

ನಟಿ ಲಿನ್ ಲೈಶ್ರಾಮ್ ಅವರು ಮೂಲತಃ ಮಣಿಪುರದವರು. 'ಮೇರಿ ಕೋಮ್', 'ರಂಗೂನ್' ಮತ್ತು ಇತ್ತೀಚೆಗೆ ತೆರೆಕಂಡ 'ಜಾನೆ ಜಾನ್' ಚಿತ್ರಗಳಲ್ಲಿ ನಟಿಸಿದ್ದಾರೆ. 'ಸ್ವಾತಂತ್ರ್ಯ ವೀರ್ ಸಾವರ್ಕರ್' ಮತ್ತು 'ತೇರಾ ಕ್ಯಾ ಹೋಗಾ ಲವ್ಲಿ' ಸಿನಿಮಾಗಳಲ್ಲಿ ರಣದೀಪ್‌ ಹೂಡಾ ಕಾಣಿಸಿಕೊಳ್ಳಲಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT