ಸೋಮವಾರ, ಸೆಪ್ಟೆಂಬರ್ 20, 2021
29 °C

ಸಿನಿಮಾದಲ್ಲಿ ಅವಕಾಶ ಕೋರಿ ಸೋನು ಸೂದ್ ಕಳುಹಿಸಿದ್ದ ಫೋಟೊ ಇದು!

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Sonu Sood Instagram Photo screengrab

ಬೆಂಗಳೂರು: ಬಾಲಿವುಡ್‌ ನಟ ಸೋನು ಸೂದ್ ತಮ್ಮ ಸಮಾಜಮುಖಿ ಕೆಲಸಗಳಿಂದ ಹೆಚ್ಚು ಸುದ್ದಿಯಲ್ಲಿರುತ್ತಾರೆ.

ಸೋನು ಸೂದ್ ಅವರು ಸಿನಿಮಾಗಳಲ್ಲಿ ನಟಿಸುವ ಇಚ್ಚೆಯಿಂದ ಮೊದಲ ಬಾರಿಗೆ ಫೋಟೊಶೂಟ್ ಮಾಡಿಸಿಕೊಂಡಿದ್ದ ಸಂದರ್ಭದ ಫೋಟೊ ಒಂದನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಅಲ್ಲದೆ, ಈ ಫೋಟೊ ಮೂಲಕ ಅವರು ‘ಹ್ಯಾಪಿ ನ್ಯೂ ಇಯರ್’ ಚಿತ್ರದಲ್ಲಿ ಅವಕಾಶ ಪಡೆದುಕೊಂಡಿರುವುದನ್ನು ಹೇಳಿದ್ದಾರೆ.

ಸೋನು ಸೂದ್, ತಮ್ಮ ಪೋಸ್ಟ್‌ಗೆ ತಮಾಷೆಯ ಅಡಿಬರಹ ಕೂಡ ನೀಡಿದ್ದಾರೆ. ಇದೊಂದು ಐತಿಹಾಸಿಕ ಫೋಟೊ ಆಗಿದ್ದು, ಇದಕ್ಕಿಂತ ಉತ್ತಮ ಫೋಟೊ ಇಲ್ಲ ಎಂದುಕೊಂಡಿದ್ದೆ ಎಂದು ಹೇಳಿದ್ದಾರೆ.

ಸೋನು ಸೂದ್ ಫೋಟೊಗೆ 11 ಲಕ್ಷಕ್ಕೂ ಲೈಕ್ಸ್ ಬಂದಿದ್ದು, ರಿಧಿಮಾ ಪಂಡಿತ್, ಸೋನಲ್ ಚೌಹಾಣ್, ಪರ್ಹಾ ಖಾನ್ ಸಹಿತ ಚಿತ್ರರಂಗದ ಹಲವು ಪ್ರಮುಖರು ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು