ಭಾನುವಾರ, ಆಗಸ್ಟ್ 14, 2022
26 °C

ಬ್ಯೂಟಿಫುಲ್ ಬಾಯ್ ಜಾಯ್ ಫೋಟೊ ಪೋಸ್ಟ್ ಮಾಡಿದ ವರುಣ್ ಧವನ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Varun Dhawan Instagram post

ಬೆಂಗಳೂರು: ಬಾಲಿವುಡ್ ಮಂದಿಯ ಶ್ವಾನಪ್ರೇಮ ಹಲವು ಬಾರಿ ಸಾಮಾಜಿಕ ತಾಣಗಳಲ್ಲಿ ಪ್ರಕಟವಾಗುತ್ತಲೇ ಇರುತ್ತದೆ.

ನಟ ವರುಣ್ ಧವನ್ ಇತ್ತೀಚೆಗೆ ಮನೆಗೆ ಪುಟ್ಟ ಬೀಗಲ್ ನಾಯಿಮರಿಯನ್ನು ತಂದಿದ್ದಾರೆ. ಆದರೆ ನಾಯಿಮರಿಗೆ ಏನು ಹೆಸರಿಡುವುದು ಎನ್ನುವ ಕುರಿತು ಅವರಿಗೆ ಗೊಂದಲ ಉಂಟಾಗಿತ್ತು.

ನಾಯಿಮರಿಗೆ ಸೂಕ್ತ ಹೆಸರನ್ನು ಸೂಚಿಸಿ, ಅವನಿಗಿನ್ನೂ ನಾಮಕರಣ ಆಗಿಲ್ಲ ಎಂದು ವರುಣ್ ಧವನ್ ಅಭಿಮಾನಿಗಳನ್ನು ಕೋರಿಕೊಂಡಿದ್ದರು.

ವರುಣ್ ಪೋಸ್ಟ್‌ಗೆ ಸಾವಿರಾರು ಮಂದಿ ಪ್ರತಿಕ್ರಿಯಿಸಿ, ವಿವಿಧ ಹೆಸರುಗಳನ್ನು ಬೀಗಲ್‌ಗೆ ಸೂಚಿಸಿದ್ದರು. ಅದರಲ್ಲಿ ವರುಣ್ ಜಾಯ್ ಎನ್ನುವ ಹೆಸರನ್ನು ಬೀಗಲ್ ನಾಯಿಮರಿಗೆ ಆಯ್ಕೆ ಮಾಡಿಕೊಂಡಿದ್ದಾರೆ.

ಮನೆಯ ಹೊಸ ಸದಸ್ಯನ ಕುರಿತು ವರುಣ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಮೈ ಬ್ಯೂಟಿಫುಲ್ ಬಾಯ್ ಜಾಯ್ ಎಂದು ಅಡಿಬರಹ ನೀಡಿ, ನಾಯಿಮರಿಯನ್ನು ಎತ್ತಿಕೊಂಡಿರುವ ಫೋಟೊ ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನಟಿ ಕೃತಿ ಸನೋನ್, ನನ್ನ ಫೋಬಿಯನ್ನು ಕೂಡ ಕರೆತಂದು ಫ್ರೆಂಡ್ಸ್ ರಿಯೂನಿಯನ್ ಮಾಡೋಣ ಎಂದು ಕಮೆಂಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು