ಗುರುವಾರ , ಫೆಬ್ರವರಿ 25, 2021
19 °C

ಜನವರಿ 24ಕ್ಕೆ ಹಸೆಮಣೆ ಏರಲಿದ್ದಾರಾ ನಟ ವರುಣ್ ಧವನ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ನಟ ವರುಣ್ ಧವನ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ತಮ್ಮ ಬಹುಕಾಲದ ಗೆಳತಿ, ವಸ್ತ್ರ ವಿನ್ಯಾಸಕಿ ನತಾಶಾ ದಲಾಲ್‌ ಜೊತೆ ಇದೇ ಭಾನುವಾರ ಹಸೆಮಣೆ ಏರಲಿದ್ದಾರೆ ಎನ್ನುತ್ತಿವೆ ಕುಟುಂಬದ ಆಪ್ತ ಮೂಲಗಳು. ವರುಣ್ ಹಾಗೂ ನತಾಶಾ ಒಟ್ಟಿಗೆ ಓದಿದ್ದರು, ಅಲ್ಲದೇ ಇಬ್ಬರೂ ಬಹಳ ದಿನಗಳಿಂದ ಪ್ರೀತಿಸುತ್ತಿದ್ದಾರೆ.

'ಹಿಂದೂ ಸಂಪ್ರದಾಯದ ಪ್ರಕಾರ ಜನವರಿ 24ಕ್ಕೆ ಮದುವೆ ನಡೆಯಲಿದೆ. ಅಲಿಬಾಗ್‌ನಲ್ಲಿ ನಡೆಯುವ ಮದುವೆ ಕಾರ್ಯಕ್ರಮದಲ್ಲಿ ಕುಟುಂಬದವರು ಹಾಗೂ ಸ್ನೇಹಿತರಷ್ಟೇ ಭಾಗವಹಿಸಲಿದ್ದಾರೆ’ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ಇವರ ವಿವಾಹ ಕಾರ್ಯಕ್ರಮವನ್ನು 2020ರ ಮೇನಲ್ಲಿ ನಡೆಸಲು ಆಯೋಜಿಸಲಾಗಿತ್ತು. ಆದರೆ ಕೊರೊನಾ ಕಾರಣದಿಂದ ಮದುವೆಯನ್ನು ಮುಂದಕ್ಕೆ ಹಾಕಲಾಗಿತ್ತು.

ವರುಣ್ ಅನಿಲ್ ಕಪೂರ್‌, ನೀತು ಕಪೂರ್‌ ಹಾಗೂ ಕಿಯಾರ ಅಡ್ವಾಣಿ ನಟನೆಯ ಜಗ್ ಜಗ್ ಜಿಯೊ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು