ಮಂಗಳವಾರ, ಜನವರಿ 18, 2022
22 °C

ಹುಟ್ಟುಹಬ್ಬದ ಸಂಭ್ರಮದಲ್ಲಿ ಬಾಲಿವುಡ್ ನಟಿ ಈಶಾ ಗುಪ್ತ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Esha Gupa Instagram

ಬೆಂಗಳೂರು: ನಟಿ ಮತ್ತು ರೂಪರ್ದಶಿಯಾಗಿ ಬಾಲಿವುಡ್‌ನಲ್ಲಿ ಹೆಸರು ಗಳಿಸಿರುವ ಈಶಾ ಗುಪ್ತ ಅವರು ಭಾನುವಾರ ನವೆಂಬರ್ 28ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಈ ಸಂದರ್ಭದಲ್ಲಿ ಕೇಕ್ ಕತ್ತರಿಸುತ್ತಿರುವ ಫೋಟೊ ಒಂದನ್ನು ಅವರು ಇನ್ಸ್‌ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಈಶಾ ಗುಪ್ತ ಹುಟ್ಟುಹಬ್ಬಕ್ಕೆ ಬಾಲಿವುಡ್ ಮಂದಿ ಶುಭಕೋರಿದ್ದಾರೆ. ಜತೆಗೆ ಕೇಕ್ ಕತ್ತರಿಸುತ್ತಿರುವ ಫೋಟೊವನ್ನು 1.5 ಲಕ್ಷಕ್ಕೂ ಅಧಿಕ ಮಂದಿ ಇನ್ಸ್‌ಟಾಗ್ರಾಂನಲ್ಲಿ ಲೈಕ್ ಮಾಡಿದ್ದಾರೆ.

ಅದಿತಿ ಸಿಂಗ್ ಶರ್ಮಾ, ಹನ್ಸಿಕಾ, ದಿಯಾ ಮಿರ್ಜಾ ಸಹಿತ ಮಾಡೆಲಿಂಗ್ ಮತ್ತು ಚಿತ್ರರಂಗದಲ್ಲಿನ ಈಶಾ ಗೆಳೆಯ-ಗೆಳತಿಯರು ಕಾಮೆಂಟ್ ಮೂಲಕ ಹುಟ್ಟುಹಬ್ಬಕ್ಕೆ ಹಾರೈಸಿದ್ದಾರೆ.

2007ರಿಂದ ಈಶಾ ಗುಪ್ತ ಬಾಲಿವುಡ್ ಚಿತ್ರರಂಗ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು