ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್ ಬಗ್ಗೆ ಪೋಷಕರಿಗೆ ತಿಳಿಸಿರಲಿಲ್ಲ: ಬಾಲಿವುಡ್ ನಟಿ ಮಹಿಮಾ ಚೌಧರಿ

Last Updated 10 ಜೂನ್ 2022, 14:08 IST
ಅಕ್ಷರ ಗಾತ್ರ

ನವದೆಹಲಿ: ಬಾಲಿವುಡ್ ನಟಿ ಮಹಿಮಾ ಚೌಧರಿ ಅವರು ತಮಗೆ ಕ್ಯಾನ್ಸರ್‌ ಇದ್ದಬಗ್ಗೆ ಪೋಷಕರಿಗೆ ತಿಳಿಸಿರಲಿಲ್ಲ ಎಂದು ಹೇಳಿದ್ದಾರೆ.

ಸದ್ಯ, ಅನುಪಮ್ ಖೇರ್ ಅವರ 'ದಿ ಸಿಗ್ನೇಚರ್‌' ಚಿತ್ರೀಕರಣ ಸಲುವಾಗಿಲಖನೌಗೆ ಬಂದಿರುವಚೌಧರಿ, ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಶೀಘ್ರದಲ್ಲೇ ಮುಂಬೈಗೆ ತೆರಳಿ ಆರೋಗ್ಯದ ವಿಚಾರವನ್ನು ಪೋಷಕರೊಂದಿಗೆ ಹೇಳಿಕೊಳ್ಳುತ್ತೇನೆ ಎಂದಿದ್ದಾರೆ.

'ನಾನು ನನ್ನ ಖಾಯಿಲೆ ಬಗ್ಗೆ ಪೋಷಕರಿಗೆ ತಿಳಿಸಿರಲಿಲ್ಲ. ಅವರು ಈಗ ಈ ಸುದ್ದಿಯನ್ನು ತಿಳಿಯಲಿದ್ದಾರೆ. ನಾನು ವಾಪಸ್‌ ಅವರ ಬಳಿಗೆ ಹೋಗಲು ಮತ್ತು ಅವರೊಂದಿಗೆ ಇರಲು ಬಯಸುತ್ತೇನೆ. ನಾನೀಗ ಸಂಪೂರ್ಣ ಚೇತರಿಸಿಕೊಂಡಿದ್ದು, ನನಗೆ ಎಲ್ಲರ ಪ್ರೀತಿ ಹಾಗೂ ಬೆಂಬಲ ಬೇಕಾಗಿದೆ' ಎಂದು ತಿಳಿಸಿದ್ದಾರೆ.

90ರ ದಶಕದಲ್ಲಿ ಹಲವು ಸಿನಿಮಾಗಳಲ್ಲಿ ಮಿಂಚಿದ್ದ ಚೌಧರಿ ಅವರಿಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿತ್ತು ಎಂಬ ವಿಚಾರವನ್ನು ಹಿರಿಯ ನಟಅನುಪಮ್ ಖೇರ್ ಅವರು ಬಹಿರಂಗಪಡಿಸಿದ್ದರು. ಚೌಧರಿ ಅವರನ್ನು ಕೊಂಡಾಡಿದ್ದ ಖೇರ್‌, ‘ಮಹಿಮಾ ನನ್ನ ರಿಯಲ್ ಹೀರೋ’ ಎಂದು ಹೇಳಿಕೊಂಡಿದ್ದರು.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಖೇರ್,‘ನನ್ನ 525ನೇ ಸಿನಿಮಾ ‘ದಿ ಸಿಗ್ನೇಚರ್’ನಲ್ಲಿ ನಟಿಸುವಂತೆ ಕೇಳಿ ಮಹಿಮಾ ಚೌದರಿ ಅವರಿಗೆ ಒಂದು ತಿಂಗಳ ಹಿಂದೆ ಕರೆ ಮಾಡಿದ್ದೆ. ಅವರಿಗೆ ಸ್ತನ ಕ್ಯಾನ್ಸರ್ ಇರುವ ವಿಚಾರ ಆಗ ತಿಳಿಯಿತು. ಅವರು ಎಷ್ಟು ಧೈರ್ಯವಂತೆ ಎಂದು ಅಚ್ಚರಿಯಾಯಿತು. ಈ ವಿಚಾರದಲ್ಲಿ ಮಹಿಮಾ, ಪ್ರಪಂಚದ ಅನೇಕ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಲಿದ್ದಾರೆ. ಮಹಿಮಾ ನೀವು ನನ್ನ ರಿಯಲ್ ಹೀರೋ. ನೀವು ಬೇಗ ಗುಣಮುಖರಾಗಲಿಎಂದು ನಾವೆಲ್ಲರೂ ಪ್ರಾರ್ಥಿಸುತ್ತೇವೆ'ಎಂದು ಬರೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT