ಸೋಮವಾರ, ಆಗಸ್ಟ್ 8, 2022
24 °C

ಅಂತರರಾಷ್ಟ್ರೀಯ ಯೋಗ ದಿನಾಚರಣೆ: ಮಲೈಕಾ ಅರೋರಾ ಯೋಗಾಭ್ಯಾಸ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Malaik Arora

ಬೆಂಗಳೂರು: ಬಾಲಿವುಡ್ ನಟಿ ಮಲೈಕಾ ಅರೋರಾ, ಸದಾ ಫಿಟ್ನೆಸ್ ಬಗ್ಗೆ ಚಿಂತಿಸುತ್ತಿರುತ್ತಾರೆ. ಅಲ್ಲದೆ, ಫಿಟ್ನೆಸ್, ಯೋಗ, ವರ್ಕೌಟ್ ಕುರಿತ ವಿಡಿಯೊ, ಫೋಟೊ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳನ್ನು ಹುರಿದುಂಬಿಸುತ್ತಿರುತ್ತಾರೆ.

ಜೂನ್ 21ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಡೆಯುತ್ತಿದೆ. ಹೀಗಾಗಿ ಮಲೈಕಾ, ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಯೋಗ-ವರ್ಕೌಟ್ ವಿಡಿಯೊ ಒಂದನ್ನು ಪೋಸ್ಟ್ ಮಾಡಿದ್ದಾರೆ.

ಮಲೈಕಾ 47 ವರ್ಷವಾದರೂ ಹದಿಹರೆಯದ ಯುವತಿಯರನ್ನು ನಾಚಿಸುವಂತೆ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಾರೆ.

ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಇನ್ನು ನಾಲ್ಕು ದಿನ ಮಾತ್ರವಿದೆ. ನೀವೇನು ಮಾಡುತ್ತಿದ್ದೀರಿ? ಎಂದು ಮಲೈಕಾ ತನ್ನ ಪೋಸ್ಟ್‌ಗೆ ಕಮೆಂಟ್ ಮಾಡುವ ಮೂಲಕ ಜನರನ್ನು ಯೋಗ ಮಾಡಲು ಪ್ರೇರೇಪಿಸಿದ್ದಾರೆ.

ಮಲೈಕಾ ಪೋಸ್ಟ್‌ಗೆ 2 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದ್ದು, ಸಾವಿರಕ್ಕೂ ಅಧಿಕ ಮಂದಿ ಯೋಗ, ವರ್ಕೌಟ್ ಕುರಿತು ಕಮೆಂಟ್ ಮೂಲಕ ಉತ್ತರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು