ಶುಕ್ರವಾರ, ಮೇ 20, 2022
26 °C

ನಟಿ ಶ್ರೀದೇವಿಯ ಫೋಟೊ ಹಂಚಿಕೊಂಡ ಪತಿ ಬೋನಿ ಕಪೂರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಿವಂಗತ ನಟಿ ಶ್ರೀದೇವಿ ಅವರ ಫೋಟೊವನ್ನು ಪತಿ ಬೋನಿ ಕಪೂರ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

ಕೆಲವು ತಿಂಗಳ ಹಿಂದಷ್ಟೆ ಇನ್‌ಸ್ಟಾಗ್ರಾಂ ಖಾತೆ ತೆರೆದಿರುವ ಬೋನಿ ಕಪೂರ್‌ ಇದೀಗ ಶ್ರೀದೇವಿ ಅವರ ಅಪರೂಪದ ಫೋಟೊ ಶೇರ್‌ ಮಾಡಿದ್ದಾರೆ.

2012ರಲ್ಲಿ, ಲಖನೌದಲ್ಲಿ ದುರ್ಗಾ ಪೂಜೆ ನಡೆದಿದ್ದ ಸಂದರ್ಭದಲ್ಲಿ ತೆಗೆದ ಫೋಟೊವನ್ನು ಅವರು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಶ್ರೀದೇವಿ ಬಿಳಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಬೆನ್ನಿನ ಮೇಲೆ ಬೋನಿ ಎಂದು ಕುಂಕುಮದಲ್ಲಿ ಬರೆಯಲಾಗಿದೆ. 

ಮೈಮಾಟ ಹಾಗೂ ವಿಭಿನ್ನ ಅಭಿನಯದ ಮೂಲಕ ಶ್ರೀದೇವಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಅವರು ದುಬೈನಲ್ಲಿ ಬಾತ್​ಟಬ್​ನಲ್ಲಿ ಮುಳುಗಿ ಮೃತಪಟ್ಟಿದ್ದರು.

ಶ್ರೀದೇವಿ ಅವರಿಗೆ ಜಾಹ್ನವಿ ಹಾಗೂ ಖುಷಿ ಎಂಬ ಇಬ್ಬರು ಹೆಣ್ಣು ಮಕ್ಕಳು. ಈಗಾಗಲೇ ಜಾಹ್ನವಿ ಕಪೂರ್‌ ಬಾಲಿವುಡ್‌ ಸ್ಟಾರ್‌ ಆಗಿದ್ದಾರೆ.ಪತಿ ಬೋನಿ ಕಪೂರ್‌ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು