ಬಾಲಿವುಡ್ ನಟ ಸನ್ನಿ ಡಿಯೋಲ್ ನಟನೆಯ ‘ಬಾರ್ಡರ್ 2’ ಸಿನಿಮಾ ಬಿಡುಗಡೆಯಾದ 2 ದಿನಗಳಲ್ಲಿ ಬಾಕ್ಸ್ ಆಫೀಸ್ನಲ್ಲಿ ₹70 ಕೋಟಿಗೂ ಅಧಿಕ ಗಳಿಕೆ ಮಾಡಿರುವುದಾಗಿ ಚಿತ್ರತಂಡ ತಿಳಿಸಿದೆ.

ಜನವರಿ 23ರಂದು ಬಿಡುಗಡೆಯಾಗಿದ್ದ ‘ಬಾರ್ಡರ್–2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನ ₹32.10 ಕೋಟಿ ಗಳಿಸಿತ್ತು. ಎರಡನೇ ದಿನ ₹40.59 ಕೋಟಿ ಗಳಿಸಿದೆ. ಈ ಮೂಲಕ ಸಿನಿಮಾವು ಬಿಡುಗಡೆಯಾದ ಎರಡೇ ದಿನದಲ್ಲಿ ₹72.69 ಕೋಟಿ ಗಳಿಸಿದೆ.
.'ಬಾರ್ಡರ್ 2' ಸಿನಿಮಾ ನೋಡಲು ಟ್ರ್ಯಾಕ್ಟರ್ಗಳಲ್ಲಿ ಆಗಮಿಸಿದ ಅಭಿಮಾನಿಗಳು.
ಸಿನಿಮಾದ ಗಳಿಕೆ ಬಗ್ಗೆ ಚಿತ್ರತಂಡವು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಬಾರ್ಡರ್–2 ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿದೆ. ನಿಮ್ಮ ಟಿಕೆಟ್ಗಳನ್ನು ಈಗಲೇ ಬುಕ್ ಮಾಡಿ, ಲಿಂಕ್ ಬಯೋದಲ್ಲಿದೆ‘. ಎಂದು ಅಡಿಬರಹ ನೀಡಿದ್ದಾರೆ.

1997ರಲ್ಲಿ ಬಿಡುಗಡೆಯಾಗಿದ್ದ ‘ಬಾರ್ಡರ್’ ಸಿನಿಮಾದ ಮುಂದುವರೆದ ಭಾಗ ಬಾರ್ಡರ್–2 ಆಗಿದೆ. ಅನುರಾಗ್ ಸಿಂಗ್ ನಿರ್ದೇಶನದ, ಟಿ-ಸೀರೀಸ್ ಮತ್ತು ಜೆಪಿ ಫಿಲ್ಮ್ಸ್ ನಿರ್ಮಾಣ ಮಾಡಿದೆ.

ಸಿನಿಮಾದಲ್ಲಿ ಸನ್ನಿ ಡಿಯೋಲ್, ಸುನೀಲ್ ಶೆಟ್ಟಿ, ಜಾಕಿ ಶ್ರಾಫ್ ಮತ್ತು ಅಕ್ಷಯ್ ಖನ್ನಾ, ವರುಣ್ ಧವನ್, ದಿಶ್ಚಿತ್ ದೋಸಾಂಜ್ ಮತ್ತು ಸೋನಮ್ ಬಾಜ್ವಾ ಸೇರಿದಂತೆ ಪ್ರಮುಖ ಕಲಾವಿದರು ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.