ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ವಾರ ಭಾರತದಲ್ಲಿ ₹100 ಕೋಟಿ ಗಳಿಕೆ ಕಂಡ ವಾರಿಸು, ತುನಿವು

Last Updated 16 ಜನವರಿ 2023, 9:54 IST
ಅಕ್ಷರ ಗಾತ್ರ

ಚೆನ್ನೈ: ತಮಿಳು ಚಿತ್ರರಂಗವು ಕಳೆದ ವಾರ ಒಂದೇ ದಿನ ವಿಜಯ್ ನಟನೆಯ ವಾರಿಸು ಮತ್ತು ಅಜಿತ್ ಕುಮಾರ್ ನಟನೆಯ ತುನಿವು ಚಿತ್ರಗಳ ಬಿಡುಗಡೆ ಮೂಲಕ ಬಾಕ್ಸ್‌ ಆಫೀ‌ಸ್‌ನಲ್ಲಿ ದೊಡ್ಡ ಪೈಪೋಟಿಗೆ ಸಾಕ್ಷಿಯಾಗಿತ್ತು.

ಎರಡೂ ಚಿತ್ರಗಳ ನಡುವೆ ಪ್ರಾದೇಶಿಕ ಬಾಕ್ಸ್ ಆಫೀಸ್‌ನಲ್ಲಿ ನೆಕ್ ಟು ನೆಕ್ ಸ್ಪರ್ಧೆ ಏರ್ಪಟ್ಟಿದ್ದು, ವಿದೇಶದಲ್ಲಿ ವಾರಿಸು, ತುನಿವುಗಿಂತಲೂ ಮುನ್ನಡೆ ಪಡೆದಿದೆ ಎಂದು ಉದ್ಯಮ ವಿಶ್ಲೇಷಕರು ಹೇಳಿದ್ಧಾರೆ.

ಬಿಡುಗಡೆಯಾಗಿ ಮೊದಲ ವಾರದ ಅಂತ್ಯದ ವೇಳೆಗೆ ವಾರಿಸು ಮತ್ತು ತುನಿವು ಎರಡೂ ಚಿತ್ರಗಳು ₹100 ಕೋಟಿ ಕ್ಲಬ್ ಸೇರಿವೆ. ಉದ್ಯಮ ವಿಶ್ಲೇಷಕ ರಾಮೇಶ್ ಬಾಲ ಈ ಕುರಿತಂತೆ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಭಾರತದಲ್ಲಿ ಎರಡೂ ಚಿತ್ರಗಳು ಉತ್ತಮವಾಗಿ ಪ್ರದರ್ಶನ ಕಾಣುತ್ತಿದ್ದು, ಮೊದಲ ವಾರಾಂತ್ಯಕ್ಕೆ ಗಳಿಕೆಯಲ್ಲಿ ₹100 ಕೋಟಿ ದಾಟಿವೆ ಎಂದು ಅವರು ತಿಳಿಸಿದ್ಧಾರೆ.

ಅಮೆರಿಕ, ಬ್ರಿಟನ್ ಸೇರಿದಂತೆ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ವಾರಿಸು, ತುನಿವುಗಿಂತಲೂ ಸ್ವಲ್ಪ ಮುನ್ನಡೆ ಪಡೆದಿದೆ. ಅಮೆರಿಕದಲ್ಲಿ ವಾರಿಸು ಗಳಿಕೆ 1 ಮಿಲಿಯನ್ ಡಾಲರ್ ದಾಟಿದ್ದು, ತುನಿವು 9 ಲಕ್ಷ ಡಾಲರ್ ಗಳಿಸಿದೆ.

ಬಹುನಿರೀಕ್ಷಿತ ವಾರಿಸು ಮತ್ತು ತುನಿವು ಕಳೆದ ಬುಧವಾರ ತೆರೆ ಕಂಡಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT