ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ತಮಿಳು ನಟ, ರಾಜಕಾರಣಿ ಕರುಣಾಸ್ ಬ್ಯಾಗ್‌ನಲ್ಲಿ 40 ಗುಂಡುಗಳು ಪತ್ತೆ: ಅಧಿಕಾರಿಗಳು

Published 2 ಜೂನ್ 2024, 13:06 IST
Last Updated 2 ಜೂನ್ 2024, 13:06 IST
ಅಕ್ಷರ ಗಾತ್ರ

ಚೆನ್ನೈ: ತಮಿಳು ನಟ ಹಾಗೂ ಮಾಜಿ ಶಾಸಕ ಕರುಣಾಸ್ ಬ್ಯಾಗ್‌ನಲ್ಲಿ 40 ಗುಂಡುಗಳು ಪತ್ತೆಯಾಗಿವೆ ಎಂದು ಇಲ್ಲಿನ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. 

ಇಲ್ಲಿಂದ ತಿರುಚ್ಚಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ತಪಾಸಣೆ ವೇಳೆ ಅವರ ಬ್ಯಾಗ್‌ನಲ್ಲಿ 40 ಗುಂಡುಗಳು ಪತ್ತೆಯಾದವು ಎಂದು ಅವರು ಹೇಳಿದರು.

ಈ ಬಗ್ಗೆ ವಿಚಾರಣೆ ನಡೆಸಿದಾಗ ಗನ್‌ ಹಾಗೂ ಗುಂಡುಗಳನ್ನು ಕಾನೂನು ಪ್ರಕಾರವಾಗಿ ಪಡೆಯಲಾಗಿದೆ. ಇದಕ್ಕೆ ಬೇಕಾದ ದಾಖಲೆಗಳು ನನ್ನ ಬಳಿ ಇವೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ವಿಮಾನದೊಳಗೆ ಗುಂಡುಗಳನ್ನು ಸಾಗಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಕರುಣಾಸ್‌ಗೆ ಹೇಳಿದಾಗ ಅವರು ಅಲ್ಲಿಂದ ತೆರಳಿದರು ಎಂದು ವರದಿಯಾಗಿದೆ.

ಕರುಣಾಸ್ ಎಂಪಿಪಿ ಪಕ್ಷದ ಸ್ಥಾಪಕರೂ ಹೌದು. ಕೆಲವು ವರ್ಷಗಳ ಹಿಂದೆ ಎಐಎಡಿಎಂಕೆ ಪಕ್ಷದ ಶಾಸಕರಾಗಿದ್ದರು. ಇವರು ತಮಿಳಿನ ಹಲವಾರು ಸಿನಿಮಾಗಳಲ್ಲಿ ಹಾಸ್ಯ ಹಾಗೂ ಖಳನಟನಾಗಿ ಬಣ್ಣ ಹಚ್ಚಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT