ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಂದಣಿಯಾದಳು ‘ಸಿಡಿ ಲೇಡಿ’

Last Updated 22 ಮಾರ್ಚ್ 2021, 4:49 IST
ಅಕ್ಷರ ಗಾತ್ರ

ಸಿಡಿ ಲೇಡಿ ಹೆಸರಿನ ಚಿತ್ರದ ಶೀರ್ಷಿಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿಯಾಗಿದೆ. ಸಂದೇಶ್‌ ನಾಗರಾಜ್‌ ಬ್ಯಾನರ್‌ ಅಡಿ ಈ ಶೀರ್ಷಿಕೆ ನೋಂದಣಿ ಆಗಿದೆ.

ರಾಜ್ಯ ರಾಜಕಾರಣದಲ್ಲಿ ಅತಿ ಹೆಚ್ಚು ಸುದ್ದಿಯಾದ ಸಿಡಿ ಪ್ರಕರಣ ಸಂಬಂಧಿಸಿದ ಸುದ್ದಿಗಳು ಟಿವಿ ವಾಹಿನಿಗಳಲ್ಲಿ ಸಿಡಿ ಲೇಡಿ ಶೀರ್ಷಿಕೆಯಲ್ಲೇ ಪ್ರಸಾರವಾಗಿದ್ದವು. ಹಾಗಾಗಿ ಈ ಶಬ್ದಗಳು ಹೆಚ್ಚು ಜನಪ್ರಿಯತೆ ಪಡೆದಿದ್ದವು. ಅದನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಶೀರ್ಷಿಕೆ ನೋಂದಣಿ ಮಾಡಲಾಗಿದೆ ಎಂಬ ಮಾತುಗಳು ಗಾಂಧಿನಗರದಲ್ಲಿ ಹರಿದಾಡುತ್ತಿವೆ.

ಆದರೆ, ನಿರ್ಮಾಪಕ ಸಂದೇಶ್‌ ನಾಗರಾಜ್‌ ಅವರು ಮಾತ್ರ ಈ ಶೀರ್ಷಿಕೆಯ ಹಿನ್ನೆಲೆಯ ಗುಟ್ಟು ಬಿಟ್ಟುಕೊಡಲಿಲ್ಲ. ಕಥೆ, ವಸ್ತು ಏನು? ಚಿತ್ರ ಶೀಘ್ರ ಸೆಟ್ಟೇರಲಿದೆಯೇ ಇಲ್ಲವೇ ಎಂಬ ಪ್ರಶ್ನೆಗಳೂ ಹಾಗೇ ಉಳಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT