ಸೋಮವಾರ, ಏಪ್ರಿಲ್ 12, 2021
22 °C

ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಆತ್ಮಹತ್ಯೆಗೆ ಯತ್ನ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಗ್ ಬಾಸ್ ಖ್ಯಾತಿಯ ನಟಿ, ಇತ್ತೀಚೆಗೆ ವಿವಾಹ ವಿವಾದದಿಂದ ಸುದ್ದಿಯಾಗಿದ್ದ ಚೈತ್ರಾ ಕೋಟೂರ್ ಅವರು ಕೋಲಾರದ ಕುರುಬರಪೇಟೆಯ ತಮ್ಮ ಮನೆಯಲ್ಲಿ ಫಿನಾಯಿಲ್‌ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಅಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಚೈತ್ರಾ ಅವರು ಇತ್ತೀಚೆಗೆ ಮಂಡ್ಯ ಮೂಲದ ಉದ್ಯಮಿ ನಾಗಾರ್ಜುನ್‌ ಅವರನ್ನು ಬೆಂಗಳೂರಿನ ಬ್ಯಾಟರಾಯನಪುರದ ಗಣಪತಿ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಮರುದಿನವೇ ಅದು ವಿವಾದವಾಗಿ ಕೋಲಾರದ ಮಹಿಳಾ ಠಾಣೆ ಮೆಟ್ಟಿಲೇರಿತ್ತು. ನನ್ನನ್ನು ಚೈತ್ರಾ ಬಲವಂತವಾಗಿ ಮದುವೆ ಆಗಿದ್ದಾರೆ ಎಂದು ನಾಗಾರ್ಜುನ್‌ ಹೇಳಿದರೆ, ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು. ನಾಗಾರ್ಜುನ್‌ ನನಗೆ ಇಷ್ಟ. ಅವರೊಂದಿಗೇ ಬಾಳುತ್ತೇನೆ ಎಂದು ಚೈತ್ರಾ ಹೇಳಿದ್ದರು.

ರಂಗಭೂಮಿ, ಸಿನಿಮಾ ನಟನೆ, ಜಾಹೀರಾತು ನಿರ್ದೇಶನದಲ್ಲಿ ಚೈತ್ರಾ ಸಕ್ರಿಯರಾಗಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು