ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಟಗರು ಪಲ್ಯ’ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ಬೆಂಬಲ

Published 19 ಅಕ್ಟೋಬರ್ 2023, 23:30 IST
Last Updated 19 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ಡಾಲಿ ಧನಂಜಯ ನಿರ್ಮಿಸಿ, ನಟ ನಾಗಭೂಷಣ್‌ ನಾಯಕನಾಗಿರುವ ‘ಟಗರು ಪಲ್ಯ’ ಚಿತ್ರ ಇದೇ ತಿಂಗಳ 27ಕ್ಕೆ ತೆರೆಗೆ ಬರುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಟ್ರೇಲರ್‌ ಅನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದರು. ನೆನಪಿರಲಿ ಪ್ರೇಮ್ ಪುತ್ರಿ ಅಮೃತ ಪ್ರೇಮ್‌ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಿದ್ದಾರೆ.

‘ಟ್ರೇಲರ್ ನೋಡಿದಾಗ ಖುಷಿಯಾಯಿತು. 7 ಸ್ಟಾರ್ ಸುಲ್ತಾನ್ ಚೆನ್ನಾಗಿ ನಟಿಸಿದೆ. ಅಮೃತಾ ಅವರಿಗೆ ಸ್ವಾಗತ. ಇದು ನಮ್ಮ‌ಮಣ್ಣಿನ ಸೊಗಡಿನ ಸಿನಿಮಾ. ಟ್ರೇಲರ್‌ನಿಂದ ಸಿನಿಮಾ ಏನು ಎಂಬುದನ್ನು ಹೇಳಬಹುದು. ಸಿನಿಮಾ ಚೆನ್ನಾಗಿ ಆಗಲಿ. ಹೀರೋಗಳು ಏನು ಮಾಡುತ್ತಿದ್ದಾರಯ್ಯ ಅಂತ ತುಂಬಾ ಜನ ಕೇಳುತ್ತಾರೆ. ನಾವು ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ. ಈ ಸಾಲಿನಲ್ಲಿ ಡಾಲಿ ಅವರು ಮೊದಲು ನಿಲ್ಲುತ್ತಾರೆ. ಇದು ಧನಂಜಯ ನಿರ್ಮಾಣದ ಮೂರನೇ ಸಿನಿಮಾ. ಆತ ಕಷ್ಟಪಟ್ಟು ಮೇಲೆ ಬಂದಿದ್ದಾನೆ. ಬಡವರ ಮಕ್ಕಳು ದೊಡ್ಡವರಾಗಬೇಕು. ಡಾಲಿ ಪಿಕ್ಚರ್ಸ್ ದೊಡ್ಡ ಪ್ರೊಡಕ್ಷನ್ ಆಗಿ ಬೆಳೆಯಲಿ’ ಎಂದು ದರ್ಶನ್‌ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಶೀರ್ಷಿಕೆಯಿಂದಲೇ ಗಮನ ಸೆಳೆದ ಚಿತ್ರ ‘ಟಗರು ಪಲ್ಯ‌’. ಉಮೇಶ್ ಕೆ. ಕೃಪ ಆ್ಯಕ್ಷನ್‌, ಕಟ್ ಹೇಳಿದ್ದಾರೆ. ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ ಸೇರಿ ದೊಡ್ಡ ತಾರಾ ಬಳಗವೇ ಜೊತೆಯಾಗಿದೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ನೀಡಿದ್ದು, ಎಸ್.ಕೆ. ರಾವ್ ಛಾಯಾಗ್ರಹಣವಿದೆ. 

ಡಾಲಿ ಧನಂಜಯ ಮಾತನಾಡಿ, ‘ಎಲ್ಲಾ ಸಂಬಂಧಗಳನ್ನು ನೆನಪಿಸುವ ಸಿನಿಮಾವೇ ‘ಟಗರು ಪಲ್ಯ’. ನಿರ್ದೇಶಕರು ಕಥೆ ಹೇಳಿದಾಗ ತುಂಬಾ ಇಷ್ವವಾಯಿತು. ಒಳ್ಳೆ ಪ್ರತಿಭೆಗಳಿಗೆ ಬಂಡವಾಳ ಹಾಕಲು ಖುಷಿ ಇದೆ. ಅವರವರ ಪ್ರತಿಭೆಗಳು ಅವರನ್ನ ಮೇಲೆ ಕರೆದುಕೊಂಡು ಬರುತ್ತಿದೆ. ನಾಗಭೂಷಣ್ ಯಾವುದೇ ಪಾತ್ರ ಕೊಟ್ಟರು ತೂಗಿಸಿಕೊಂಡು ಹೋಗುವ ನಟ. ‘ಟಗರು ಪಲ್ಯ’ದಲ್ಲಿ ನೀವು ಬೇರೆ ನಾಗಭೂಷಣ್ ನೋಡಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT