ಬೆಂಗಳೂರು: ಬಾರಿ ಕುತೂಹಲ ಮೂಡಿಸಿದ್ದ ಗುಳಿಕೆನ್ನೆ ಚೆಲುವೆ, ನಟಿ ದೀಪಿಕಾ ಪಡುಕೋಣೆ ನಟಿಸಿರುವ ಛಪಾಕ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಆ್ಯಸಿಡ್ ದಾಳಿ ಸಂತ್ರಸ್ತೆ ಪಾತ್ರದಲ್ಲಿ ನಟಿಸಿರುವ ದೀಪಿಕಾ ಪಡುಕೋಣೆ ಅವರನ್ನು ನೋಡಿದವರಿಗೆ ಈ ಪಾತ್ರದಾರಿ ದೀಪಿಕಾ ಪಡುಕೋಣೆ ಅವರೇ ಎಂಬ ಪ್ರಶ್ನೆ ಮೂಡದೇ ಇರದು. ಆ್ಯಸಿಡ್ ದಾಳಿಗೆ ತುತ್ತಾಗಿರುವ ಯುವತಿಯಂತೆಯೇ ದೀಪಿಕಾ ಛಪಾಕ್ ಸಿನಿಮಾದಲ್ಲಿ ಕಾಣುತ್ತಾರೆ.

2005ರಲ್ಲಿ ದೆಹಲಿಯಲ್ಲಿ ಯುವತಿ ಲಕ್ಷ್ಮೀ ಅಗರವಾಲ್ ಮೇಲೆ ನಡೆದ ಆ್ಯಸಿಡ್ ದಾಳಿ ನಡೆದಿತ್ತು. ಈ ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಛಪಾಕ್ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ.

ಆ್ಯಸಿಡ್ ದಾಳಿಯ ನಂತರ ಯುವತಿ ಅನುಭವಿಸುವ ಮಾನಸಿಕ ಯಾತನೆ, ಸಾಮಾಜಿಕ ಮತ್ತು ಕೌಟುಂಬಿಕ ಪರಿಣಾಮಗಳು, ಪೊಲೀಸ್ ವ್ಯವಸ್ಥೆಕುರಿತಾದ ಒಳತೋಟಿಗಳನ್ನು ಈ ಸಿನಿಮಾ ಬಿಚ್ಚಿಡಲಿದೆ ಎಂದು ನಿರ್ದೇಶಕಿ ಮೇಘನಾ ಗುಲ್ಜಾರ್ ಹೇಳಿದ್ದಾರೆ.ಛಪ್ಪಾಕ್ ಸಿನಿಮಾಗೆ ದೀಪಿಕಾ ಪಡುಕೋಣೆ ಕೂಡ ಸಹ ನಿರ್ಮಾಪಕಿಯಾಗಿದ್ದಾರೆ.

ಮಾಲ್ತಿ ಪಾತ್ರದಾರಿಯಾಗಿ ದೀಪಿಕಾ ಪಡುಕೋಣೆ ಅವರ ಅಭಿನಯ ಮನೋಜ್ಞವಾಗಿದೆ ಎಂದುಮೇಘನಾ ಹೇಳಿದ್ದಾರೆ. ಈ ಸಿನಿಮಾದ ಟ್ರೇಲರ್ ಅನ್ನು ದೀಪಿಕಾ ಪಡುಕೋಣೆ ಬಿಡುಗಡೆ ಮಾಡಿದ್ದು ವಿಶೇಷ. ಈ ಚಿತ್ರದಲ್ಲಿ ವಿಕ್ರಾಂತ್ ಮ್ಯಾಸಿ ಕೂಡ ನಟಿಸಿದ್ದಾರೆ.

ಜನವರಿ 10 ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಆ್ಯಸಿಡ್ ದಾಳಿ ಸಂತ್ರಸ್ತೆಯಾಗಿ ದೀಪಿಕಾರನ್ನು ನೋಡಲು ಅವರು ಅಭಿಮಾನಿಗಳು ಇಷ್ಟುಪಡುತ್ತಿಲ್ಲ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಯುಟ್ಯೂಬ್ನಲ್ಲಿ ಲೈಕ್ಗಳಿಗಿಂತ ಡಿಸ್ಲೈಕ್ಗಳೇ ಹೆಚ್ಚಾಗಿ ಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.