ಬೆಂಗಳೂರು: ಕನ್ನಡದ ಖ್ಯಾತ ಚಿತ್ರ ಸಾಹಿತಿ ದಿವಂಗತ ಚಿ. ಉದಯಶಂಕರ್ ಅವರ ಪತ್ನಿ ಶಾರದಮ್ಮ(74) ಗುರುವಾರ ನಿಧನರಾದರು.

ಮೃತರಿಗೆ ನಟ ಚಿ. ಗುರುದತ್ ಸೇರಿದಂತೆ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ. ಶಾರದಮ್ಮ ಅವರುವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಮೃತರ ಅಂತ್ಯಕ್ರಿಯೆಯು ಹರಿಶ್ಚಂದ್ರ ಘಾಟ್‌ನಲ್ಲಿ ಮಧ್ಯಾಹ್ನ ನೆರವೇರಿತು.

1964ರ ಜೂನ್ 5ರಂದು ಶಾರದಮ್ಮ ಮತ್ತು ಚಿ. ಉದಯಶಂಕರ್ ಅವರ ವಿವಾಹ ನೆರವೇರಿತ್ತು. 1993ರಲ್ಲಿಯೇ ಉದಯಶಂಕರ್ ಮೃತಪಟ್ಟಿದ್ದರು. ತಮ್ಮ ಮೂವರು ಮಕ್ಕಳಿಗೂ ಸುಂದರ ಬದುಕು ಕಟ್ಟಿಕೊಟ್ಟಿದ್ದು ಶಾರದಮ್ಮ ಹೆಗ್ಗಳಿಕೆ. ಅವರ ಹಿರಿಯ ಪುತ್ರ ರವಿಶಂಕರ್ ಕೆಲವು ವರ್ಷದ ಹಿಂದೆ ಮೃತಪಟ್ಟಿದ್ದರು.

ದ್ವಿತೀಯ ಪುತ್ರ ಗುರುದತ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪುತ್ರಿ ಶ್ಯಾಮಲಾ ಅಮೆರಿಕದಲ್ಲಿ ನೆಲೆಸಿದ್ದಾರೆ. ಕೊರೊನಾ ಸೋಂಕಿನ ಭೀತಿಯಿಂದಾಗಿ ಅವರು ಅಮ್ಮನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.