ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಂಡ ಪುಟಾಣಿಗಳ ಕಥಾನಕ

Last Updated 19 ಆಗಸ್ಟ್ 2020, 7:23 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗದಲ್ಲಿ ವರ್ಷಕ್ಕೆ ಏಳೆಂಟು ಮಕ್ಕಳ ಸಿನಿಮಾಗಳು ನಿರ್ಮಾಣವಾಗುತ್ತವೆ. ಬಹುತೇಕ ಸಿನಿಮಾಗಳು ಸಬ್ಸಿಡಿ ದೃಷ್ಟಿ ಇಟ್ಟುಕೊಂಡೇ ನಿರ್ಮಾಣವಾಗುತ್ತವೆ. ಕೆಲವು ಸಿನಿಮಾಗಳು ಬಿಡುಗಡೆ ಕೂಡ ಕಾಣುವುದಿಲ್ಲ. ಮತ್ತೊಂದೆಡೆ ತೆರೆ ಕಾಣಲು ಸಜ್ಜಾಗುವ ಇಂತಹ ಸಿನಿಮಾಗಳಿಗೆ ಥಿಯೇಟರ್‌ಗಳು ಸಿಗುವುದು ಅಪರೂಪ.

‘ಪ್ರಚಂಡ ಪುಟಾಣಿಗಳು’ ಡಿ ಆ್ಯಂಡ್ ಡಿ ಫಿಲಂ ಪ್ರೊಡಕ್ಷನ್ಸ್‌ನಡಿ ಪದ್ಮಾವತಿ ನಿರ್ಮಿಸಿರುವ ಮಕ್ಕಳ ಚಿತ್ರ. ಕೋಲಾರದ ನರಸಾಪುರದ ಗುಡ್ಡಗಾಡು ಪ್ರದೇಶದಲ್ಲಿ ಕ್ಲೈಮ್ಯಾಕ್ಸ್‌ ಚಿತ್ರೀಕರಣ ನಡೆಸುವ ಮೂಲಕ ಇದರ ಶೂಟಿಂಗ್‌ ಮುಕ್ತಾಯಗೊಂಡಿದೆ.
ನಟ ಶಶಿಕುಮಾರ್‌ ಇದರಲ್ಲಿ ಪ್ರಧಾನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಿಧಿಗಾಗಿ ಮಕ್ಕಳನ್ನು ಬಲಿಕೊಡಲು ಹೊರಟ ದುಷ್ಕರ್ಮಿಗಳ ವಿರುದ್ಧ ಹೋರಾಡುವ ಪಾತ್ರವದು.

ವಿನು ಮನಸು ಸಂಗೀತ ನೀಡಿರುವ ಈ ಚಿತ್ರಕ್ಕೆ ಸುರೇಶ್ ಕಂಬಳಿ ಸಾಹಿತ್ಯ ರಚಿಸಿದ್ದಾರೆ. ರಾಜೀವ್ ಕೃಷ್ಣ ಅವರ ನಿರ್ದೇಶನವಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ನೃತ್ಯ ಹಾಗೂ ಸಾಹಸ ನಿರ್ದೇಶನವನ್ನೂ ಅವರೇ ನಿಭಾಯಿಸಿದ್ದಾರೆ.

ಕೋಲಾರ, ಚಿಂತಾಮಣಿ, ಕೈಲಾಸಗಿರಿಯ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಅವಿನಾಶ್, ಶೋಭರಾಜ್, ಬಲರಾಂ ಪಂಚಾಲ್, ನರಸಾಪುರ ನಾಗರಾಜ್, ಅಶ್ವಥ ರೆಡ್ಡಿ, ಕೋಲಾರ ಮಂಜುಳಾ, ಸುಗುಣ, ಬೇಬಿ ಸುಪ್ರಿತಾ ರಾಜ್, ಬೇಬಿ ಅಂಕಿತಾ, ಮಾಸ್ಟರ್ ಧ್ರುವ, ಮಾಸ್ಟರ್ ಕ್ರಿತನ್, ಮಾಸ್ಟರ್ ಹರ್ಷ, ಬೇಬಿ ಅಂಜಲಿ, ಮಾಸ್ಟರ್ ಆಕಾಶ್ ಸೇರಿದಂತೆ ಕೋಲಾರದ ಅಂತರಗಂಗೆಯ ಬುದ್ಧಿಮಾಂದ್ಯ ಮಕ್ಕಳ ಅನಾಥಾಶ್ರಮದ 50 ಮಂದಿ ಮಕ್ಕಳು ಇದರಲ್ಲಿ ನಟಿಸಿದ್ದಾರೆ.

ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣವಿದೆ. ಸಂಜೀವ್ ರೆಡ್ಡಿ ಅವರ ಸಂಕಲನವಿದೆ. ಈಗಾಗಲೇ, ಎಡಿಟಿಂಗ್ ಕಾರ್ಯ ಪ್ರಾರಂಭವಾಗಿದ್ದು ಥಿಯೇಟರ್‌ಗಳು ಪುನರಾರಂಭವಾದ ತಕ್ಷಣ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT