ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

59 ಚೀನಾ ಆ್ಯಪ್‌ಗಳ ನಿಷೇಧ: ಸರ್ಕಾರದ ಕ್ರಮ ಸ್ವಾಗತಿಸಿದ ನಟ–ನಟಿಯರು

Last Updated 30 ಜೂನ್ 2020, 13:48 IST
ಅಕ್ಷರ ಗಾತ್ರ
ADVERTISEMENT
""
""
""
""
""
""

ಟಿಕ್‌ಟಾಕ್‌ ಸೇರಿದಂತೆ ಹಲವು ಚೀನಾ ಮೂಲದ ಆ್ಯಪ್‌ಗಳನ್ನು ನಮ್ಮ ಸ್ಯಾಂಡಲ್‌ವುಡ್‌ ನಟ–ನಟಿಯರು ನಿರಂತರವಾಗಿ ಬಳಸುತ್ತಿದ್ದರು. ಈಗ 59 ಚೀನಾ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಈ ಆ್ಯಪ್‌ ನಿಷೇಧದ ಬಗ್ಗೆ ಕೆಲವು ಸ್ಯಾಂಡಲ್‌ವುಡ್‌ ನಟ–ನಟಿಯರು ತಮ್ಮ ಅಭಿಪ್ರಾಯಗಳನ್ನು ‘ಮೆಟ್ರೊ ಪುರವಣಿ‌‌‘ಯೊಂದಿಗೆ ಹಂಚಿಕೊಂಡಿದ್ದಾರೆ.

ಉತ್ತಮ ಕೆಲಸ

ದೇಶದ ಸುರಕ್ಷತೆಗೋಸ್ಕರ ಸರ್ಕಾರ ತ್ತಮ ಕೆಲಸ ಮಾಡಿದೆ. ಕೇಂದ್ರ ಸರ್ಕಾರ ನಿಷೇಧ ಮಾಡಿದ ಚೀನಾ ಆ್ಯಪ್‌ಗಳಲ್ಲಿ ನಾನು ನಾಲ್ಕೈದು ಆ್ಯಪ್‌ಗಳನ್ನು‌ ಬಳಸುತ್ತಿದ್ದೆ. ‘ಟಿಕ್‌ಟಾಕ್‘‌, ‘ಹಲೋ‘ದಂತಹ ಆ್ಯಪ್‌ಗಳಿಗೆ ನಾವು ಆಡಿಕ್ಟ್‌ ಆಗಿ ಹೋಗಿದ್ದೆವು. ನಮ್ಮಲ್ಲೂ ಇಂತಹ ಸ್ವದೇಶಿ ಆ್ಯಪ್‌ಗಳಿವೆ ಎಂಬುದೂ ಗೊತ್ತಿದ್ದರೂ ಚೀನಾ ಆ್ಯಪ್‌ಗಳ ಮೇಲೆ ಅವಲಂಬಿತವಾಗಿದ್ದೆವು. ಇನ್ನು ಮುಂದೆ ನಾವು ಸ್ವದೇಶಿ ಆ್ಯಪ್ ಬಳಸುವ ಕಾಲ ಬಂದಿದೆ. ಸ್ವದೇಶಿ ಮಹತ್ವ ಗೊತ್ತಾಗುತ್ತಿದೆ. ಹಾಗೇ ಚೀನಾಗೂ ನಮ್ಮ ಮಹತ್ವದ ಅರಿವಾಗಿದೆ. ಇದು ಉತ್ತಮ ನಡೆ.

-ದೀಪಿಕಾ ದಾಸ್‌, ನಟಿ

***

ದೇಸಿ ವಸ್ತುಗಳಿಗೆ ಆದ್ಯತೆ ಸಿಗಲಿ

ನಾನು ಆರೇಳು ವರ್ಷಗಳ ಹಿಂದಿನಿಂದಲೂ ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕೆಂದು ಹೇಳುತ್ತಿದ್ದೆ. ದೇಸಿ ವಸ್ತುಗಳ ಜಾಗಕ್ಕೆ ಚೀನಾದ ವಸ್ತುಗಳು ಬದಲಿಯಾಗುತ್ತಿರುವುದು ಬಗ್ಗೆ ನಾನು ಧ್ವನಿ ಎತ್ತಿದ್ದೆ. ಪ್ರತಿ ದಸರಾ ಸಮಯದಲ್ಲಿ ಚನ್ನಪಟ್ಟಣ ಗೊಂಬೆಗಳ ಖರೀದಿಗೆ ನಾನು ಪ್ರೋತ್ಸಾಹಿಸುತ್ತಿದ್ದೆ. ಮಾರುಕಟ್ಟೆಯಲ್ಲಿ ಚೀನಾ ಆಟಿಕೆಗಳ ಅಬ್ಬರದಿಂದ ಚನ್ನಪಟ್ಟಣದ ಗೊಂಬೆಗಳನ್ನು ಕೇಳುವವರಿಲ್ಲ. ಆದರೆ ಆ ಗೊಂಬೆಗಳಿಗೆ ಅರಬ್‌, ಯುರೋಪಿಯನ್‌ ರಾಷ್ಟ್ರಗಳಲ್ಲಿ ಬೇಡಿಕೆಯಿದೆ. ಇಲ್ಲಿಂದ ರಫ್ತಾಗುತ್ತಿದೆ. ಆದರೆ ನಮಗ್ಯಾಕೆ ಚೀನಾದ ಪ್ಲಾಸ್ಟಿಕ್‌ ಆಟಿಕೆಗಳ ವ್ಯಾಮೋಹ?

‘ಟಿಕ್‌ ಟಾಕ್‘‌, ‘ಹಲೋ‘ ಆ್ಯಪ್‌ ನನ್ನಲ್ಲಿ ಪ್ರಮೋಷನ್‌ಗೆ ವಿಡಿಯೊ, ಫೋಟೊ ಹಂಚಿಕೊಳ್ಳಲು ಕೇಳಿತ್ತು. ಆದರೆ ಆ ಆಫರ್‌ ಒಪ್ಪಿಕೊಂಡಿಲ್ಲ. ಚೀನಾದ ಯಾವ ಆ್ಯಪ್‌ಗಳನ್ನೂ ನಾನು ಬಳಸುತ್ತಿಲ್ಲ. ಈಗ ಸ್ವದೇಶಿ ಆ್ಯಪ್‌ಗಳ ಬಳಕೆ ಜಾಸ್ತಿಯಾಗಲಿ. ಹಾಗೇ ಭಾರತದಲ್ಲಿಯೇ ವಸ್ತು, ಬಟ್ಟೆ ಉತ್ಪಾದನೆ ಜಾಸ್ತಿಯಾಗಲಿ.

ಲಾಕ್‌ಡೌನ್‌ ಘೋಷಣೆಯಾದ ಬಳಿಕ ಮಾರುಕಟ್ಟೆಯಲ್ಲಿ ಚೀನಾ ಮೇಡ್‌ ನೂಡಲ್ಸ್‌, ವಸ್ತುಗಳು ಸಿಗುತ್ತಿದ್ದವು. ಕೆಲವು ವಸ್ತುಗಳ ಹೆಸರನ್ನು ನಾನು ಕೇಳಿರಲಿಲ್ಲ. ನಮ್ಮ ಮನೆಯಲ್ಲಿ ಮೊದಲಿನಿಂದಲೂ ಚೀನಾ ಮೇಡ್‌ ವಸ್ತುಗಳ ಬಳಕೆ ಮಾಡುತ್ತಿಲ್ಲ. ಈಗಲೂ ಸ್ವದೇಶಿ ಖಾದಿ ಬ್ಯಾಗ್‌, ಸಾವಯವ ಆಹಾರದಂತಹ ದೇಸಿ ಉತ್ಪನ್ನಗಳಿಗೇ ಒತ್ತು ಕೊಡುತ್ತಿದ್ದೇವೆ.

-ಮಾನ್ವಿತಾ, ನಟಿ

***

ಪರ್ಯಾಯ ಕ್ರಮವೂ ಬೇಕು

ಸಿನಿಮಾ,ಟಿ.ವಿ ಮತ್ತು ಮನರಂಜನಾ ಮಾಧ್ಯಮಗಳು ಗಗನಕುಸುಮವಾಗಿದ್ದ ಸಮಯದಲ್ಲಿ ಟಿಕ್‌ಟಾಕ್ ಜನಸಾಮಾನ್ಯರಿಗೆ‌ ಸುಲಭವಾಗಿ ದೊರೆತ ಮನರಂಜನಾ ಮಾಧ್ಯಮವಾಗಿತ್ತು. ನನ್ನಂಥ ಎಷ್ಟೋ ಯುವಕ, ಯುವತಿಯರ ಕನಸುಗಳಿಗೆ ಬಣ್ಣ ತುಂಬಿದ್ದೇ ಈ ಟಿಕ್‌ಟಾಕ್.

ಟಕ್‌ಟಾಕ್ ಸೇರಿದಂತೆ ಚೀನಾ ಆ್ಯಪ್‌ಗಳನ್ನು ನಿಷೇಧಿಸಿದರೆ ಸಾಲದು, ಅಂಥ ಆ್ಯಪ್‌ಗಳನ್ನು ದೇಸಿಯವಾಗಿ ಅಭಿವೃದ್ಧಿಪಡಿಸುವ ಬಗ್ಗೆಯೂ ಚಿಂತಿಸಬೇಕು. ಈ ನಿಷೇಧ ಎನ್ನುವುದು ಆ್ಯಪ್‌ಗಷ್ಟೇ ಸೀಮಿತವಾಗದೇ, ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ಅಗ್ಗದ ಉತ್ಪನ್ನಗಳನ್ನೂ ನಿಷೇಧಿಸಲಿ.

-ಬಿ.ಎಂ. ಅಭಿಷೇಕ್, ಕಿರುತೆರೆ ಸಹನಟ ಮತ್ತು ಮಾಡೆಲ್‌‌

***

ಚೀನಾಕ್ಕೆ ಲಾಭ ಮಾಡಿಕೊಡುವುದು ಬೇಡ

ಭಾರತ– ಚೀನಾ ಸಂಘರ್ಷದ ಸಮಯದಲ್ಲಿ ಭಾರತೀಯ ಸೈನಿಕರು ಗಡಿ ಪ್ರದೇಶದಲ್ಲಿ ರಾತ್ರಿ– ಹಗಲು, ಮಳೆ– ಚಳಿಗೆ ಕಷ್ಟಪಟ್ಟು ಹೋರಾಡುತ್ತಿದ್ದಾರೆ. ಇತ್ತೀಚೆಗೆ ಸೈನಿಕರೊಬ್ಬರು ಹಂಚಿಕೊಂಡ ವೈರಲ್‌ ವಿಡಿಯೊದಲ್ಲಿ ಅವರ ಮಾತುಗಳನ್ನು ಕೇಳಿ ನನಗೆ ತುಂಬಾ ಬೇಜಾರಾಗಿತ್ತು.

ಸೈನಿಕರು ಗಡಿಯಲ್ಲಿ ನಮಗಾಗಿ ಕಷ್ಟಪಡುತ್ತಿರುವಾಗ, ಶತ್ರು ದೇಶದ ಆ್ಯಪ್‌ನ್ನು ಬಳಸಿ ಅವರಿಗೆ ಲಾಭ ಮಾಡಿಕೊಡುವುದು ಯಾಕೆ? ಅವರು ಆ ಲಾಭದ ಹಣವನ್ನು ಮಿಲಿಟರಿಗೆ ಉಪಯೋಗಿಸುತ್ತಾರೆ. ನಾನು ಆಗಲೇ ಚೀನಾ ಆ್ಯಪ್‌ಗಳನ್ನು ಡಿಲೀಟ್‌ ಮಾಡಲು ನಿರ್ಧರಿಸಿದ್ದೆ. ಈಗ ಸರ್ಕಾರವು ಎಲ್ಲಾ ಆ್ಯಪ್‌ಗಳನ್ನು ನಿಷೇಧಿಸಲು ತೆಗೆದುಕೊಂಡ ನಿರ್ಧಾರ ಶ್ಲಾಘನೀಯ.

-ಅನಿರುದ್ಧ ಜತ್ಕರ್‌, ನಟ

***

ಸ್ವದೇಶಿ ಆ್ಯಪ್ ಬಳಕೆ ಮಾಡಿ

ದೇಶದ ಸುರಕ್ಷತೆಗಾಗಿ ತೆಗದುಕೊಂಡಸರ್ಕಾರದ ನಿರ್ಧಾರ ಸರಿಯಾಗಿದೆ. ಟಿಕ್‌ಟಾಕ್‌, ಹಲೋ ಆ್ಯಪ್‌ಗಳು ಮಕ್ಕಳಿಗೆ, ಹದಿಹರೆಯದ ವಯಸ್ಸಿನವರಿಗೆ ಇಷ್ಟವಾಗಿತ್ತು. ಅವರೆಲ್ಲ ಈಗ ಸ್ವದೇಶಿ ಆ್ಯಪ್‌ ಬಳಸಬೇಕು

-ಉಪೇಂದ್ರ, ನಟ

***

ಪ್ರತಿಭೆಯಿದ್ದರೆ ಎಲ್ಲಾ ಕಡೆ ಮನ್ನಣೆ

ವಿದ್ಯಾರ್ಥಿಗಳು, ಯುವಕರು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಟಿಕ್‌ಟಾಕ್‌ನ್ನು ವೇದಿಕೆ ಮಾಡಿಕೊಂಡಿದ್ದರು. ಟಿಕ್‌ಟಾಕ್‌ ತುಂಬ ಜನಪ್ರಿಯವಾಗಿದ್ದರಿಂದ ಆ ವಿಡಿಯೊ ತುಣುಕುಗಳು ಬೇಗ ಜನರಿಗೆ ತಲುಪಿ ಜನಪ್ರಿಯತೆ ಪಡೆಯುತ್ತಿದ್ದರು. ಕೆಲ ಪ್ರತಿಭೆಗಳು ಟಿಕ್‌ಟಾಕ್‌ನಿಂದ ಬೆಳಕಿಗೆ ಬಂದಿವೆ. ಅಂತಹವರು ಕೆಲವರಿಗೆ ಸಿನಿಮಾ, ಧಾರಾವಾಹಿಯಲ್ಲಿ ಅವಕಾಶಗಳೂ ಸಿಕ್ಕಿವೆ.

ಆದರೆ ಟಿಕ್‌ ಟಾಕ್‌ ಇಲ್ಲದಿದ್ದರೂ ನಿಜವಾದ ಪ್ರತಿಭೆಯಿರುವವರಿಗೆ ಎಲ್ಲಿ ಬೇಕಾದರೂ ಅವಕಾಶಗಳು ಸಿಗಬಹುದು. ನಾನು ಟಿಕ್‌ಟಾಕ್‌ ಖಾತೆ ಹೊಂದಿದ್ದೆ. ಆದರೆ ಆ್ಯಕ್ಟಿವ್‌ ಆಗಿರಲಿಲ್ಲ. ಸೀರಿಯಲ್‌ ಸೆಟ್‌ನಲ್ಲಿ ಎಲ್ಲರ ಜೊತೆ ಕಳೆದ ಕ್ಷಣಗಳನ್ನು ವಿಡಿಯೊ ಮಾಡಿ ಹಂಚಿಕೊಳ್ಳುತ್ತಿದ್ದೆ. ಈಗ ಆ ಖಾತೆಯನ್ನು ಡೀಆಕ್ಟಿವ್‌ ಮಾಡಿದ್ದೇನೆ.

-ರಾಕೇಶ್‌ ಮಯ್ಯ, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT