ಆಯ್ಕೆಯಲ್ಲಿ ರಾಜಕೀಯ ಲಾಬಿ ಇರುವುದು ಹೊಸ ವಿಷಯವಲ್ಲ. ಸಿನಿಮಾ ಚೆನ್ನಾಗಿದ್ದರೆ ಆಯ್ಕೆಯಾಗಬೇಕು. ಫೋನ್ ಕರೆಗಳ ಮೂಲಕ ಚಿತ್ರ ಆಯ್ಕೆಯಾಗಬಾರದು. ಬೆಂಗಳೂರು ಚಿತ್ರೋತ್ಸವದ ಕುರಿತು ಬೇರೆ ಕಡೆಗಳಲ್ಲಿಯೂ ಒಳ್ಳೆ ಅಭಿಪ್ರಾಯವಿಲ್ಲ. ಲಾಬಿಯೇ ಮಾಡುವುದಾದರೆ ತೀರ್ಪುಗಾರರ ಮಂಡಳಿ ಯಾಕೆ ಬೇಕು? ಹೀಗಾದಲ್ಲಿ ಇಲ್ಲಿ ಸಿಗುವ ಪ್ರಶಸ್ತಿಗೆ ಮೂರು ಕಾಸಿನ ಬೆಲೆಯೂ ಇರದು. ಪುಣೆ ಚಿತ್ರೋತ್ಸವದಂತೆ ಇಲ್ಲಿಯೂ ಯಾರ ಫೋನ್ ಕರೆಗಳಿಗೂ ಸ್ಪಂದಿಸದ ಲಾಬಿಗೆ ಮಣಿಯದ ತೀರ್ಪುಗಾರರನ್ನು ನೇಮಕ ಮಾಡಿಕೊಳ್ಳಬೇಕು’