‘ಮೊದಲು ಶುಕ್ರವಾರದ ಮಾರ್ನಿಂಗ್ ಶೋಗೆ ‘ಚಿತ್ರಮಂದಿರ ಭರ್ತಿಯಾಗಿದೆ’ ಎಂಬ ಬೋರ್ಡ್ ಹಾಕುತ್ತಿದ್ದೆವು. ಇದೀಗ ‘ಪ್ರೇಕ್ಷಕರಿಲ್ಲದೆ ಶೋ ಸ್ಥಗಿತಗೊಳಿಸಲಾಗಿದೆ’ ಎಂದು ಹೇಳುವ ಸ್ಥಿತಿ ಬಂದಿದೆ...’

ಹೀಗೆಂದವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ, ಮೂರು ಚಿತ್ರಮಂದಿರಗಳ ಮಾಲೀಕ ಎಂ.ನರಸಿಂಹಲು. ಇಂತಹ ಸ್ಥಿತಿಯಲ್ಲಿ ರಾಜ್ಯದಲ್ಲಿನ ಚಿತ್ರಮಂದಿರಗಳನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿಗಳ ಮೊರೆ ಹೋಗಲು ಇದೀಗ ಚಿತ್ರರಂಗ ನಿರ್ಧರಿಸಿದೆ.

ಇತ್ತೀಚೆಗೆ ನಟ ಶಿವರಾಜ್ಕುಮಾರ್ ಅವರ ನಿವಾಸದಲ್ಲಿ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆಯೊಂದು ನಡೆದಿತ್ತು. ಈ ಸಭೆಯಲ್ಲಿ ಮುಖ್ಯವಾಗಿ ಚಿತ್ರಮಂದಿರಗಳ ಮಾಲೀಕರ ಸಮಸ್ಯೆಗಳು ವಿಸ್ತೃತವಾಗಿ ಚರ್ಚೆಯಾದವು. ಸಭೆಯಲ್ಲಿ ನಟರಾದ ದುನಿಯಾ ವಿಜಯ್, ಧ್ರುವ ಸರ್ಜಾ, ಗಣೇಶ್, ನಿರ್ಮಾಪಕರಾದ ಸಾ.ರಾ.ಗೋವಿಂದು, ಜಯಣ್ಣ, ಕೆ.ಪಿ.ಶ್ರೀಕಾಂತ್, ಬಿ.ಕೆ.ಗಂಗಾಧರ್, ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ಮುಂತಾದವರು ಭಾಗವಹಿಸಿದ್ದರು.

ಚಿತ್ರರಂಗದ ಸಮಸ್ಯೆಗಳ ಬಗ್ಗೆ ಎಲ್ಲರನ್ನೂ ಒಳಗೊಂಡ ಒಂದು ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿಯಾಗಲಿದೆ. ಸದ್ಯ ಚಿತ್ರಮಂದಿರಗಳನ್ನು ಉಳಿಸಿಕೊಳ್ಳುವುದು ನಮ್ಮ ಆದ್ಯತೆ.
ಕೆ.ಪಿ.ಶ್ರೀಕಾಂತ್, ನಿರ್ಮಾಪಕ

‘ಸ್ಟಾರ್ ನಟರ ಚಿತ್ರಗಳಿಲ್ಲದೆ ಚಿತ್ರಮಂದಿರಗಳು ಮುಚ್ಚುವ ಹಂತಕ್ಕೆ ಬಂದಿವೆ. ಚಿತ್ರಮಂದಿರಗಳಿಗೆ ಜನರು ಬರುತ್ತಿಲ್ಲ. ದೊಡ್ಡ ಸಿನಿಮಾಗಳೇ ಇಲ್ಲ. ಇದರಿಂದಾಗಿ ಚಿತ್ರಮಂದಿರಗಳ ಮಾಲೀಕರು ಸಂಕಷ್ಟಕ್ಕೀಡಾಗಿದ್ದಾರೆ. ಸ್ಯಾಟಲೈಟ್, ಒಟಿಟಿ ವೇದಿಕೆಗಳು ಎಷ್ಟೇ ಇದ್ದರೂ ಸಿನಿಮಾಗಳು ಮೊದಲು ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗಬೇಕಲ್ಲವೇ. ಇಲ್ಲಿಯೇ ಹೆಚ್ಚಿನ ಆದಾಯ ಬರುವುದು. ಚಿತ್ರಮಂದಿರಗಳೇ ಇಲ್ಲವಾದಲ್ಲಿ...ಹೀಗೊಂದು ಸ್ಥಿತಿ ಇದೀಗ ಬಂದಿದೆ. ರಾಜ್ಯದಲ್ಲಿನ ಚಿತ್ರಮಂದಿರಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಕಾವೇರಿ, ಉಮಾ, ರಂಗನಾಥ ಹಾಗೂ ವಿನಾಯಕ ಚಿತ್ರಮಂದಿರಗಳು ಮುಚ್ಚಿವೆ. ನನ್ನದೂ ಮೂರು ಚಿತ್ರಮಂದಿರಗಳಿವೆ. ಆದಾಯವಿಲ್ಲದೆ ಎಷ್ಟು ದಿನವೆಂದು ವೇತನ ನೀಡುತ್ತಿರಲು ಸಾಧ್ಯ? ಎಷ್ಟು ಸಾಲ ಮಾಡಲು ಸಾಧ್ಯ? ಪ್ರತಿ ತಿಂಗಳು ನನ್ನ ಎರಡು ಚಿತ್ರಮಂದಿರಕ್ಕೆ ಐದೂವರೆ ಲಕ್ಷ ರೂಪಾಯಿ ಕೇವಲ ವಿದ್ಯುತ್ ಬಿಲ್ ಬರುತ್ತಿದೆ. ಜನ ಬಂದಾಗಲಷ್ಟೇ ಚಿತ್ರಮಂದಿರಗಳನ್ನು ತೆರೆಯುವ ಸ್ಥಿತಿ ಬಂದಿದೆ. ಸ್ಟಾರ್ ನಟರೆಲ್ಲರನ್ನೂ ಕರೆದು ಮತ್ತೊಂದು ಸುತ್ತಿನ ಸಭೆ ನಡೆಸುವುದಾಗಿ ಶಿವರಾಜ್ಕುಮಾರ್ ಅವರು ತಿಳಿಸಿದ್ದಾರೆ. ಸ್ಟಾರ್ ನಟರ ಚಿತ್ರಗಳು ಕನಿಷ್ಠ ಎರಡು ತಿಂಗಳಿಗೆ ಒಂದು ಬರಬೇಕಿದೆ. ಹೆಚ್ಚು ಸಿನಿಮಾಗಳನ್ನು ಮಾಡುವ ಮನಃಸ್ಥಿತಿ ನಾಯಕರಿಗೇ ಬರಬೇಕು’ ಎಂದರು ನರಸಿಂಹಲು.

‘ಇರುವ ಚಿತ್ರಮಂದಿರಗಳನ್ನು ಉಳಿಸಿಕೊಳ್ಳುವತ್ತ ಇದೀಗ ನಮ್ಮ ಚಿತ್ತವಿದೆ. ಸರ್ಕಾರದಿಂದ ಸಬ್ಸಿಡಿ ಹಾಗೂ ಚಿತ್ರಮಂದಿರಗಳ ನವೀಕರಣಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರಕಿದರೆ ಚಿತ್ರಮಂದಿರಗಳ ಮಾಲೀಕರು ಉಸಿರಾಡಬಹುದು. ಈ ನಿಟ್ಟಿನಲ್ಲಿ ಇದೇ ತಿಂಗಳಾಂತ್ಯಕ್ಕೆ ಶಿವರಾಜ್ಕುಮಾರ್ ಅವರ ಸಮ್ಮುಖದಲ್ಲಿ ನಾವೆಲ್ಲರೂ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದೇವೆ’ ಎಂದರು.

‘120 ಚಿತ್ರಮಂದಿರ ತಾತ್ಕಾಲಿಕ ಸ್ಥಗಿತ’

‘ಕಳೆದ ಎರಡ್ಮೂರು ತಿಂಗಳಲ್ಲಿ ರಾಜ್ಯದಾದ್ಯಂತ ಸುಮಾರು 120 ಚಿತ್ರಮಂದಿರಗಳು ತಾತ್ಕಾಲಿಕವಾಗಿ ಸ್ಥಗಿತವಾಗಿವೆ. ಸದ್ಯಕ್ಕೆ ಸ್ಟಾರ್ಸ್ ಸಿನಿಮಾಗಳಿಲ್ಲ. ಮುಂದೆ ಸರಣಿಯಾಗಿ ಸ್ಟಾರ್ಗಳ ಸಿನಿಮಾಗಳು ಬಿಡುಗಡೆಯಾಗಲಿವೆ. ಅಲ್ಲಿಯವರೆಗೆ ಚಿತ್ರಮಂದಿರಗಳನ್ನು ಉಳಿಸಿಕೊಳ್ಳುವುದು ಬಹುಮುಖ್ಯ. ಮುಂದಿನ ಎರಡು ವರ್ಷ ಚಿತ್ರಮಂದಿರಗಳಿಗೆ ವಿದ್ಯುತ್ ಸಬ್ಸಿಡಿ ತೆರಿಗೆ ಸಬ್ಸಿಡಿ ಅಗತ್ಯವಾಗಿದೆ. ಈ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದೆ ಇಡಲಿದ್ದೇವೆ. ಸ್ಟಾರ್ ನಟರ ಸಿನಿಮಾಗಳು ವಿಳಂಬವಾಗುತ್ತಿರುವ ಬಗ್ಗೆಯೂ ಶಿವರಾಜ್ಕುಮಾರ್ ಅವರು ಸಂಬಂಧಪಟ್ಟವರೊಂದಿಗೆ ಮಾತನಾಡಿದ್ದಾರೆ. ಮುಂದಿನ ಆರರಿಂದ ಒಂಬತ್ತು ತಿಂಗಳಲ್ಲಿ ಹಲವು ಸ್ಟಾರ್ ನಟರ ಚಿತ್ರಗಳು ತೆರೆಗೆ ಬರುತ್ತಿವೆ. ಈ ಅವಧಿಯಲ್ಲಿ ಸಿನಿಮಾವಿಲ್ಲವೆಂದು ಚಿತ್ರಮಂದಿರಗಳನ್ನು ಮುಚ್ಚುತ್ತಿದ್ದಾರೆ. ಸರ್ಕಾರ ಏನೇ ಸಹಾಯ ಮಾಡಿದರೂ ಸಿನಿಮಾವಿಲ್ಲವೆಂದರೆ ಪ್ರಯೋಜನವಿಲ್ಲ. ಮುಖ್ಯವಾಗಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಚಿತ್ರಮಂದಿರಗಳ ಸ್ಥಿತಿ ಘೋರವಾಗಿದೆ’ ಎನ್ನುತ್ತಾರೆ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್.

ಸ್ಟಾರ್ ನಟರ ಸಿನಿಮಾಗಳಿಲ್ಲ!

2025ರ ಐದು ತಿಂಗಳು ಮುಗಿಯುತ್ತಾ ಬಂದಿದೆ. ಇಲ್ಲಿಯವರೆಗೂ ಸ್ಟಾರ್ ನಟರ ಸಿನಿಮಾ ರಿಲೀಸ್ ಆಗಿಲ್ಲ. ಯುವ ರಾಜ್ಕುಮಾರ್ ನಟನೆಯ ‘ಎಕ್ಕ’ ಸಿನಿಮಾ ಜೂನ್ 6ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಆದರೆ ಇದು ಮುಂದಕ್ಕೆ ಹೋಗುವ ಸಾಧ್ಯತೆಯೇ ದಟ್ಟವಾಗಿ ಕಾಣುತ್ತಿದೆ. ಆಗಸ್ಟ್ 15ರಂದು ‘45’ ಹಾಗೂ ಅಕ್ಟೋಬರ್ 2ರಂದು ‘ಕಾಂತಾರ’ ಪ್ರೀಕ್ವೆಲ್ ಹೊರತುಪಡಿಸಿ ಬೇರೆ ಯಾವ ಸ್ಟಾರ್ ನಟರ ಚಿತ್ರಗಳ ಬಿಡುಗಡೆ ದಿನಾಂಕ ಘೋಷಣೆಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.