ಭಾನುವಾರ, ಆಗಸ್ಟ್ 25, 2019
27 °C

ನಕ್ಕು ನಲಿಸುವ ‘ಡ್ರೀಮ್‌ ಗರ್ಲ್‌’

Published:
Updated:
Prajavani

ಆಯುಷ್ಮಾನ್‌ ಖುರಾನ ನಟನೆಯ ‘ಡ್ರೀಮ್‌ ಗರ್ಲ್‌’ ಸಿನಿಮಾದ ಟ್ರೇಲರ್‌, ಪ್ರೇಕ್ಷಕರನ್ನು ಸಿಕ್ಕಾಪಟ್ಟೆ ನಗಿಸಿದೆ.

ಟ್ರೇಲರ್‌ನ ಮೊದಲ ದೃಶ್ಯದಲ್ಲಿಯೇ ಸೀತೆಯ ಪಾತ್ರದಲ್ಲಿ ಆಯುಷ್ಮಾನ್‌ ಕಾಣಿಸಿಕೊಳ್ಳುತ್ತಾರೆ. ಉದ್ಯೋಗ ಗಿಟ್ಟಿಸಿಕೊಳ್ಳಲು ‘ಡ್ರೀಮ್‌ ಗರ್ಲ್‌’ ಆಗಿ ಅವರು ಬದಲಾಗುತ್ತಾರೆ.

ಕಾಲ್‌ ಸೆಂಟರ್‌ನಲ್ಲಿ ಕೆಲಸ ಮಾಡುವಾಗ ಹುಡುಗಿಯ ಧ್ವನಿಯಲ್ಲಿ ಮಾತನಾಡಿ ಹತ್ತಾರು ಯುವಕರ ಕನಸಿನ ರಾಣಿಯಾಗುವ ಕಥಾ ಹಂದರವನ್ನು ಸಿನಿಮಾ ಒಳಗೊಂಡಿದೆ. ‘ಪೂಜಾ’ ಪಾತ್ರಕ್ಕಾಗಿ ಆಯುಷ್ಮಾನ್‌ ಹುಡುಗಿಯರ ರೀತಿ ಮಾತನಾಡುವುದನ್ನು ಕೂಡ ಕಲಿತುಕೊಂಡಿದ್ದಾರೆ.

‘ಪೂಜಾ’ಳ ಹಿಂದೆ ಬೀಳುವವರ ಸಾಲಿನಲ್ಲಿ ಪಡ್ಡೆ ಹುಡುಗರು ಮಾತ್ರ ಅಲ್ಲ, ಅವರ ಕಾಲೊನಿಯ ಹಿರಿಯರೂ ಇದ್ದಾರೆ. ಕೊನೆಗೆ ಸ್ವತಃ ಆಯುಷ್ಮಾನ್‌ ತಂದೆ ಕೂಡ ಇದರಲ್ಲಿ ಸಿಲುಕುತ್ತಾರೆ. ಎಲ್ಲರನ್ನೂ ನಗಿಸಿ, ಅಳಿಸಿ, ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಳ್ಳುವ ‘ಪೂಜಾ‘ಳನ್ನು ಎಲ್ಲರೂ ಹುಡುಕಲು ಆರಂಭಿಸುತ್ತಾರೆ. 3 ನಿಮಿಷದ ಸಿನಿಮಾ ಟ್ರೇಲರ್‌ನಲ್ಲೂ ಆಯುಷ್ಮಾನ್‌ ಹುಡುಗಿಯರಂತೆ ಮಾತನಾಡುವ ದೃಶ್ಯಗಳು ನಗು ಉಕ್ಕಿಸುತ್ತವೆ.

‘ಸೀರೆ ಎಳೆದಾಗ ಈ ಕಾಲದ ದ್ರೌಪದಿ ಸುಮ್ಮನಿರುವುದಿಲ್ಲ’ ಎನ್ನುವಂತಹ ಪಂಚಿಂಗ್ ಡೈಲಾಗ್‌ಗಳು ಕಚಗುಳಿ ಇಡುವಂತಿವೆ. ಅನ್ನು ಕಪೂರ್‌, ವಿಜಯ್‌ ರಾಜ್‌, ಅಭಿಷೇಕ್‌ ಬ್ಯಾನರ್ಜಿ, ಮನ್ಜೋತ್‌ ಸಿಂಗ್‌, ನಿಧಿ ಬಿಷ್ಠ್‌, ರಾಜೇಶ್‌ ಶರ್ಮಾ, ರಾಜ್‌ ಬನ್ಸಾಲಿ ನಟಿಸಿದ್ದಾರೆ.

ನಶ್ರತ್‌ ಭರುಚ (Nushrat Bharucha) ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ರಾಜ್‌ ಶಾಂಡಿಲ್ಯ ಅವರ ಚಿತ್ರಕಥೆ ಹಾಗೂ ನಿರ್ದೇಶನ ಈ ಸಿನಿಮಾಕ್ಕಿದೆ. ಏಕ್ತಾ ಕಪೂರ್‌, ಶೋಭಾ ಕಪೂರ್‌, ಆಶಿಶ್ ಸಿಂಗ್ ನಿರ್ಮಾಣ ಮಾಡಿದ್ದಾರೆ. ಸೆಪ್ಟೆಂಬರ್‌ 13ರಂದು ಸಿನಿಮಾ ಬಿಡುಗಡೆಯಾಗಲಿದೆ.

Post Comments (+)