ವರುಣ್‌ ಬರ್ತ್‌ಡೇಗೆ ಅಪ್ಪ ಕೊಡ್ತಾರೆ ‘ಕೂಲಿ’

ಶನಿವಾರ, ಏಪ್ರಿಲ್ 20, 2019
32 °C

ವರುಣ್‌ ಬರ್ತ್‌ಡೇಗೆ ಅಪ್ಪ ಕೊಡ್ತಾರೆ ‘ಕೂಲಿ’

Published:
Updated:
Prajavani

ತೊಂಬತ್ತರ ದಶಕದ ಕ್ಲಾಸಿಕ್‌ ಕಾಮಿಡಿ ಸಿನಿಮಾ ‘ಕೂಲಿ ನಂ. 1’ ರೀಮೇಕ್‌ ಆಗುತ್ತಿದ್ದು, ವರುಣ್‌ ಧವನ್‌ ಮತ್ತು ಸಾರಾ ಅಲಿ ಖಾನ್‌ ಚಿತ್ರೀಕರಣಪೂರ್ವ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೂಲಿ ರಾಜು ಪಾತ್ರದಲ್ಲಿ ಗೋವಿಂದ್‌ ನಟನೆ ಮರೆಯಲು ಅಸಾಧ್ಯ. ಆದರೆ ಕಾಮಿಡಿ ಪಾತ್ರಗಳಲ್ಲಿ ಸೈ ಅನಿಸಿಕೊಂಡಿರುವ ವರುಣ್‌, ರಾಜು ಪಾತ್ರಕ್ಕೆ ತಮ್ಮದೇ ಛಾಪು ನೀಡುತ್ತಾರೆ ಎಂಬುದು ಬಾಲಿವುಡ್‌ನ ವಿಶ್ವಾಸ. 

ಕರೀನಾ ಕಪೂರ್‌ ಮಾಡಿದ್ದ ಲವರ್‌ ಗರ್ಲ್‌ ಪಾತ್ರಕ್ಕೆ ಸಾರಾ ಅಲಿ ಖಾನ್‌ ಜೀವ ತುಂಬಲಿದ್ದಾರೆ. ಸಾರಾ–ಧವನ್‌ ಜೋಡಿ ಮೋಡಿ ಮಾಡುವುದರಲ್ಲಿ ಸಂಶಯವಿಲ್ಲ. ಕೂಲಿ ಕಾರ್ಮಿಕನಾದ ರಾಜು, ತಾನು ಆಗರ್ಭ ಶ್ರೀಮಂತ ಎಂದು ನಂಬಿಸಿ ಶ್ರೀಮಂತರ ಮಗಳನ್ನು ಮದುವೆಯಾಗುವುದು ಚಿತ್ರದ ಒಂದೆಳೆ ಕತೆ. ಗೋವಿಂದ್‌ ಮತ್ತು ಆಗ ಬಿ ಟೌನ್‌ನ ಮುಂಚೂಣಿ ಹೀರೊಯಿನ್‌ ಆಗಿದ್ದ ಕರಿಶ್ಮಾ ಅವರ ಕೆಮಿಸ್ಟ್ರಿ, ಹಾಸ್ಯ ಮಿಶ್ರಿತ ಸಂಭಾಷಣೆ ಮತ್ತು ಸನ್ನಿವೇಶಗಳು ಚಿತ್ರವನ್ನು ಮನೆ ಮಾತಾಗಿಸಿತ್ತು. ಇದೀಗ ರೀಮೇಕ್‌ ಸುದ್ದಿಯಿಂದಾಗಿ ಮತ್ತೆ ಹಳೆಯ ಚಿತ್ರವನ್ನು ಮೆಲುಕು ಹಾಕುವಂತಾಗಿದೆ.

ಹೀಗೆ, ‘ಕೂಲಿ ನಂ.1’ ಚಿತ್ರದ ಎರಡನೇ ಆವೃತ್ತಿ ಕುರಿತು ಕುತೂಹಲ ಹೆಚ್ಚುತ್ತಿರುವಾಗಲೇ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡುವ ತಯಾರಿಯಲ್ಲಿದೆ ಚಿತ್ರ ತಂಡ. ನಿರ್ದೇಶಕ ಡೇವಿಡ್‌ ಧವನ್‌ ಅವರು ತಮ್ಮ ಮಗ ವರುಣ್‌ಗೆ ಈ ಬಾರಿಯ ಜನ್ಮ ದಿನದ (ಏಪ್ರಿಲ್ 24) ಉಡುಗೊರೆಯಾಗಿ ಫಸ್ಟ್‌ ಲುಕ್ಅನ್ನು ಅಂದೇ ಬಿಡುಗಡೆ ಮಾಡಲಿದ್ದಾರೆ. 

ಡೇವಿಡ್ ಅವರ ಅದೃಷ್ಟದೋಟ ಶುರುವಾಗಿದ್ದೇ ‘ಕೂಲಿ ನಂ. 1’ ಮೂಲಕ. ಹಿಟ್‌ ಚಿತ್ರಗಳ ಸರದಾರ ಎಂಬ ಹೆಗ್ಗಳಿಕೆ ಅವರಿಗೆ ದಕ್ಕಿಸಿಕೊಟ್ಟಿದ್ದು ಈ ಚಿತ್ರ. ಇದೀಗ, ಮಗನಿಗೂ ತಮಗೂ ರೀಮೇಕ್‌ ಚಿತ್ರದ ಮೂಲಕ ಅದೃಷ್ಟ ಖುಲಾಯಿಸುತ್ತದೆ ಎಂದು ಡೇವಿಡ್‌ ನಂಬಿದ್ದಾರಂತೆ. ಅಲ್ಲದೆ, ಫಸ್ಟ್‌ ಲುಕ್‌ ಬಿಡುಗಡೆಯಂದೇ ಚಿತ್ರೀಕರಣದ ಮುಹೂರ್ತವೂ ಫಿಕ್ಸ್‌ ಆಗಲಿದೆ ಎಂದು ಹೇಳಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !