ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಯೋಧರಿಗೆ ಕಿರುಚಿತ್ರದ ಗೌರವ

Last Updated 4 ಮೇ 2020, 19:30 IST
ಅಕ್ಷರ ಗಾತ್ರ

ಕೊರೊನಾ ವೈರಾಣುವಿನ ನಾಶಕ್ಕೆ ಟೊಂಕ ಕಟ್ಟಿ ನಿಂತಿರುವ ವೈದ್ಯರು ಹಾಗೂ ಇತರ ವೈದ್ಯಕೀಯ ಸಿಬ್ಬಂದಿಯ ಕೆಲಸಕ್ಕೆ ಗೌರವ ಸೂಚಿಸುವುದಕ್ಕಾಗಿ ಕಿರುಚಿತ್ರವೊಂದನ್ನು ಸಿದ್ಧಪಡಿಸಿದ್ದಾರೆ ವಾಗ್ಮಿ ಆರ್. ಯಜುರ್ವೇದಿ. ವಾಗ್ಮಿ ಅವರು ಚಿತ್ರ ನಿರ್ಮಾಪಕ ರಘುನಾಥ್ ಅವರ ಪುತ್ರ. ಕಿರುಚಿತ್ರದ ಹೆಸರು ‘ದಿ ಡಾರ್ಕ್‌ ಸ್ಪ್ರೆಡ್’.

ಈ ಕಿರುಚಿತ್ರದಲ್ಲಿ ಇರುವುದು ಎರಡು ಪಾತ್ರಗಳು. ಒಂದು ಪಾತ್ರ ಬಾವಲಿಯದ್ದು ಮತ್ತೊಂದು ಪಾತ್ರ ಜೋಕರ್‌ನದ್ದು. ‘ಸಾಹಸ ಮತ್ತು ರೋಚಕತೆಯು ಈ ಕಿರುಚಿತ್ರದ ಪ್ರಧಾನ ಅಂಶ. ಈ ಹೊತ್ತಿನ ಕೊರೊನಾ ಸನ್ನಿವೇಶವನ್ನು ಮನಮುಟ್ಟುವಂತೆ ಇದರಲ್ಲಿ ಕಟ್ಟಿಕೊಡಲಾಗಿದೆ’ ಎಂದು ಕಿರುಚಿತ್ರ ತಂಡ ಹೇಳಿಕೊಂಡಿದೆ.

‘ಕೆಲವು ವೈದ್ಯರು ಹಾಗೂ ಇತರ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆಗಳು ನಡೆದಿವೆ. ಹೀಗಿದ್ದರೂ ಅವರು ಪುನಃ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಅಂಥವರಿಗೆ ನಮ್ಮ ಕಿರುಚಿತ್ರ ಗೌರವ ಅರ್ಪಿಸುತ್ತಿದೆ. ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತದೆ’ ಎನ್ನುತ್ತಾರೆ ವಾಗ್ಮಿ.

‘ದ ಡಾರ್ಕ್ ಸ್ಪ್ರೆಡ್’ನಲ್ಲಿ ಚಿಂತನ್ ಜೋಯಿಸ್ ಮತ್ತು ವಾಗ್ಮಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಕಥೆ, ಚಿತ್ರಕಥೆ ಚಿಂತನ್ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT