ಸೋಮವಾರ, ಜೂನ್ 14, 2021
23 °C

ಕೋವಿಡ್‌ನಿಂದ ಗುಣಮುಖರಾದ ನಟ ಅಮಿತಾಬ್‌ ಬಚ್ಚನ್‌ ಆಸ್ಪತ್ರೆಯಿಂದ ಬಿಡುಗಡೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಕೋವಿಡ್‌ ದೃಡಪಟ್ಟಿದ್ದ ಹಿನ್ನೆಲೆಯಲ್ಲಿ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಅಮಿತಾಬ್ ಬಚ್ಚನ್ ಭಾನುವಾರ ಬಿಡುಗಡೆಯಾಗಿದ್ದಾರೆ. 

ಆಸ್ಪತ್ರೆಗೆ ದಾಖಲಾದ 23 ದಿನಗಳ ಬಳಿಕ ಅಮಿತಾಬ್‌ ಬಚ್ಚನ್‌ ಬಿಡುಗಡೆಯಾಗಿದ್ದು, ಅವರ ಪುತ್ರ ಅಭಿಷೇಕ್‌ ಬಚ್ಚನ್‌ಗೆ ಚಿಕಿತ್ಸೆ ಮುಂದುವರೆದಿದೆ. 

77 ವರ್ಷದ ಅಮಿತಾಬ್‌ ಬಚ್ಚನ್‌ ಅವರಿಗೆ ಜುಲೈ 11 ರಂದು ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಆ ನಂತರ ಅವರ ಪುತ್ರ ಅಭಿಷೇಕ್‌ ಬಚ್ಚನ್‌, ಸೊಸೆ ಐಶ್ವರ್ಯಾ ರೈ ಮತ್ತು ಮೊಮ್ಮಗಳಿಗೂ ಕೋವಿಡ್‌ ಇರುವುದು ಬೆಳಕಿಗೆ ಬಂದಿತ್ತು.  

ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಅಮಿತಾಬ್‌ ಅವರು ಮುಂಬೈನ ತಮ್ಮ ನಿವಾಸದಲ್ಲಿ ಕ್ವಾರಂಟೈನ್‌ ಆಗಿರುವುದಾಗಿ ಎಂದು ಟ್ವೀಟ್‌ ಮಾಡಿದ್ದಾರೆ. 

'ನನ್ನ ಕೋವಿಡ್‌ ಪರೀಕ್ಷೆಯ ಫಲಿತಾಂಶ ನೆಗೆಟಿವ್‌ ಬಂದಿದೆ. ನನ್ನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ನಾನು ಮನೆಗೆ ಮರಳಿ ಹೋಮ್‌ ಕ್ವಾರಂಟೈನ್‌ ಆಗಿದ್ದೇನೆ. ದೇವರ ಕೃಪೆ, ಅಪ್ಪ-ಅಮ್ಮನ ಆಶೀರ್ವಾದ, ಆತ್ಮೀಯ ಸ್ನೇಹಿತರ ಪ್ರಾರ್ಥನೆ, ಅಭಿಮಾನಿಗಳ ಹರಕೆ ಮತ್ತು ನಾನಾವತಿ ಆಸ್ಪತ್ರೆಯ ಅತ್ಯುತ್ತಮ ಆರೈಕೆ ಮತ್ತು ಶುಶ್ರೂಷೆಯಿಂದ ನನಗೆ ಈ ದಿನವನ್ನು ಕಾಣಲು ಸಾಧ್ಯವಾಗಿದೆ' ಎಂದು ಅಮಿತಾಬ್‌ ಬಚ್ಚನ್‌ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು