ಶುಕ್ರವಾರ, ಡಿಸೆಂಬರ್ 4, 2020
21 °C

ಮೇಘನಾ ಮಗುವಿಗೆ ನ. 12ರಂದು ತೊಟ್ಟಿಲ ಶಾಸ್ತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿರಂಜೀವಿ ಸರ್ಜಾ-ಮೇಘನಾರಾಜ್‌ ಮಗುವಿನ ನಾಮಕರಣ ನವೆಂಬರ್‌ 12ರಂದು ಮಧ್ಯಾಹ್ನ 12ಕ್ಕೆ ನಡೆಯಲಿದೆ. ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಮೇಘನಾ ತವರುಮನೆ (ಸುಂದರರಾಜ್‌ ಪ್ರಮೀಳಾ ಜೋಷಾಯ್‌ ಮನೆ)ಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಮೇಘನಾ ಅವರ ತಂದೆ, ನಟ ಸುಂದರರಾಜ್‌ ತಿಳಿಸಿದ್ದಾರೆ. 

ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನದ ಬಳಿಕ ಅವರ ಕುಟುಂಬದಲ್ಲಿ ಮೊಮ್ಮಗ ಬಂದಿರುವುದು ಸಹಜವಾಗಿ ಸುಂದರರಾಜ್‌ ದಂಪತಿಗೆ ಸಂತಸ ತಂದಿದೆ. 

ಮಗು ಜನಿಸಿದ ಬಳಿಕ ಚಿರಂಜೀವಿ ಸಹೋದರ ದ್ರುವ ಸರ್ಜಾ ಮಗುವಿಗಾಗಿ ಬೆಳ್ಳಿಯ ತೊಟ್ಟಿಲು ಖರೀದಿಸಿದ್ದರು. ಇನ್ನೊಂದು ತೊಟ್ಟಿಲು ಕಲಘಟಗಿಯಿಂದ ತರಿಸಿದ್ದೂ ಸುದ್ದಿಯಾಗಿತ್ತು. 

ಈಗಾಗಲೇ ಸುಂದರರಾಜ್‌ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಅಲಂಕಾರ, ಸಿದ್ಧತೆ ಸಾಗಿದೆ. ಈ ಸಂದರ್ಭ ಮೇಘನಾ ಅವರು ತಮ್ಮ ಮುಂದಿನ ನಿರ್ಧಾರಗಳ ಬಗ್ಗೆ ಮಾತನಾಡಲಿದ್ದಾರೆ ಎಂದು ಸುಂದರರಾಜ್‌ ಸುಳಿವು ನೀಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು