ಬೆಂಗಳೂರು: ಬಾಲಿವುಡ್‌ನ ಖ್ಯಾತ ನಟ ಸುನಿಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ, ಕ್ರಿಕೆಟಿಗ ಕೆ. ಎಲ್. ರಾಹುಲ್ ಡೇಟಿಂಗ್ ಮಾಡುತ್ತಿರುವ ಬಗ್ಗೆಆಗಾಗ ವರದಿಗಳು ಬರುತ್ತಿರುತ್ತವೆ.

ರಾಹುಲ್ ಸದ್ಯ ಲಂಡನ್‌ನಲ್ಲಿ ಇದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾ ಇಂಗ್ಲೆಂಡ್‌ಗೆ ತೆರಳಿದ್ದು, ರಾಹುಲ್ ಕೂಡ ಜೊತೆಯಲ್ಲಿದ್ದಾರೆ. ಈಗ ಅತಿಯಾ ಕೂಡ ಲಂಡನ್‌ನಲ್ಲಿ ಇದ್ದಾರೆ ಎನ್ನಲಾಗಿದೆ.

ಇಬ್ಬರು ಬಿಡುವಿನ ಸಮಯದಲ್ಲಿ ರೆಸ್ಟೋರೆಂಟ್ ಹಾಗೂ ಲಂಡನ್ ಬೀದಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಅತಿಯಾ, ರಾಹುಲ್ ಜೋಡಿಯ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ರಾಹುಲ್‌ಗೆ ಅಭಿಮಾನಿಯೊಬ್ಬ ಈಗ ಏನು ಮಾಡುತ್ತಿರುವಿರಿ? ಎಂದು ಕೇಳಿದ್ದರು. ಅದಕ್ಕೆ ರಾಹುಲ್, ಅತಿಯಾ ಜೊತೆ ಇರುವ ಫೋಟೊ ಹಾಕಿ, ಗೆಳತಿ ಜೊತೆ ಇರುವೆ ಎಂದು ಹೇಳಿದ್ದಾರೆ. ಅತಿಯಾ ಲಂಡನ್‌ನಲ್ಲಿ ಇರುವುದಕ್ಕೆ ಈ ಮೇಲಿನಚಿತ್ರವೇ ಬಲವಾದ ಸಾಕ್ಷಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಈ ಹಿಂದೆ ಅತಿಯಾ ಕುರಿತಂತೆ ರಾಹುಲ್ ಬಳಿ ಕೇಳಿದಾಗ, ನಾನು ಅತಿಯಾ ಸ್ನೇಹಿತರು ಅಷ್ಟೇ ಎಂದು ಹೇಳಿದ್ದರು. ಇಬ್ಬರೂ ಕೂಡ ತಮ್ಮ ಡೇಟಿಂಗ್ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.