ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಹನ ಕಾಲೆಳೆದ ‘ಡಾಲಿ’!

Last Updated 9 ಡಿಸೆಂಬರ್ 2022, 9:22 IST
ಅಕ್ಷರ ಗಾತ್ರ

‘ಟಗರು’ ಸಿನಿಮಾ ಮೂಲಕ ಚಂದನವನದಲ್ಲಿ ಸದ್ದು ಮಾಡಿದವರು ನಟರಾದ ಧನಂಜಯ ಹಾಗೂ ವಸಿಷ್ಠ ಸಿಂಹ. ಚಿತ್ರದಲ್ಲಿನ ‘ಡಾಲಿ’ ಹಾಗೂ ‘ಚಿಟ್ಟೆ’ ಪಾತ್ರ ತೆರೆ ಮೇಲೆ ಮೋಡಿ ಮಾಡಿತ್ತು. ಇದಾದ ಬಳಿಕ ‘ಹೆಡ್‌ಬುಷ್‌’ ಸಿನಿಮಾದಲ್ಲೂ ಇಬ್ಬರೂ ಜೊತೆಯಾಗಿ ನಟಿಸಿದ್ದರು.

ಸಿನಿಪಯಣ ಹೊರತುಪಡಿಸಿಯೂ ಧನಂಜಯ ಹಾಗೂ ವಸಿಷ್ಠ ಸ್ನೇಹಿತರು. ಇದೀಗ ವಸಿಷ್ಠ ಸಿಂಹ ಅವರು ಹರಿಪ್ರಿಯಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಬೆನ್ನಲ್ಲೇ ಧನಂಜಯ ಅವರೊಂದು ಟ್ವೀಟ್‌ ಮಾಡಿದ್ದಾರೆ.

ಶುಕ್ರವಾರ(ಡಿ.9) ತನ್ನ ಸಾಮಾಜಿಕ ಮಾಧ್ಯಮಗಳಲ್ಲಿ ನಿಶ್ಚಿತಾರ್ಥದ ಫೋಟೊ ಹಾಗೂ ವಿಡಿಯೊಗಳನ್ನು ವಸಿಷ್ಠ ಸಿಂಹ ಪೋಸ್ಟ್‌ ಮಾಡಿದ್ದರು. ಸಾವಿರಾರು ಅಭಿಮಾನಿಗಳು ಈ ಜೋಡಿಗೆ ಶುಭಕೋರಿದ್ದಾರೆ. ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಧನಂಜಯ, ‘ಇಬ್ಬರಿಗೂ ಶುಭಾಶಯ. ನೂರು ಕಾಲ ಚೆನ್ನಾಗಿ ಬಾಳಿ. ಹರಿಪ್ರಿಯಾ ಅವರೇ ಅವನು ನಮ್ಮ ಕೈಗೆ ಸಿಗ್ತಾ ಇಲ್ಲ. ಆವಾಗಾವಾಗ ನಮಗೂ ಸ್ವಲ್ಪ ಬಿಟ್ಟುಕೊಡಿ’ ಎನ್ನುತ್ತಾ ಸಿಂಹನ ಕಾಲೆಳೆದಿದ್ದಾರೆ. ಜೊತೆಗೆ ಸಿನಿಮಾದ ಹಾಡೊಂದನ್ನೂ ಟ್ಯಾಗ್‌ ಮಾಡಿ ಸ್ನೇಹಿತನ ಮದುವೆಗೆ ಶುಭಕೋರಿದ್ದಾರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT