ಮಂಗಳವಾರ, ಮಾರ್ಚ್ 31, 2020
19 °C

ದಮಯಂತಿ ದರ್ಬಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

‘ನಿನಗಾಗಿ’ ನಟಿ ರಾಧಿಕಾ ಕುಮಾರಸ್ವಾಮಿ ನಟಿಸಿದ ಮೊದಲ ಚಿತ್ರ. ವೃತ್ತಿಬದುಕಿನ ಒಂದೂವರೆ ದಶಕದಲ್ಲಿ ಹಲವು ವಿಭಿನ್ನ ಪಾತ್ರಗಳಲ್ಲಿ ಬಣ್ಣ ಹಚ್ಚಿದ ಹಿರಿಮೆ ಅವರದ್ದು. ನಾಲ್ಕು ವರ್ಷದ ಹಿಂದೆ ತೆರೆಕಂಡ ‘ರುದ್ರತಾಂಡವ’ದಲ್ಲಿ ನಟಿಸಿದ ಬಳಿಕ ಅವರು ಬಣ್ಣದಲೋಕದಿಂದ ದೂರ ಸರಿದಿದ್ದರು. ಈಗ ‘ದಮಯಂತಿ’ ಚಿತ್ರದ ಮೂಲಕ ವೃತ್ತಿಬದುಕಿನ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಖುಷಿಯಲ್ಲಿದ್ದಾರೆ.

ಪ್ರಸ್ತುತ ರಾಧಿಕಾ ‘ಕಾಂಟ್ರಾಕ್ಟ್‌’, ‘ರಾಜೇಂದ್ರ ಪೊನ್ನಪ್ಪ’ ಮತ್ತು ‘ಬೈರಾದೇವಿ’ ಚಿತ್ರದಲ್ಲಿಯೂ ಬ್ಯುಸಿ. ಬಹುನಿರೀಕ್ಷಿತ ‘ದಮಯಂತಿ’ ಚಿತ್ರ ನವೆಂಬರ್‌ 29ರಂದು ಬಿಡುಗಡೆಯಾಗುತ್ತಿದೆ. ಇಂತಹ ಪಾತ್ರದಲ್ಲಿ ನಟಿಸಬೇಕೆಂಬುದು ಅವರ ಕನಸಾಗಿತ್ತಂತೆ. ಅದು ಈ ಚಿತ್ರದ ಮೂಲಕ ಈಡೇರಿದೆ.

ನವರಸನ್‌ ಕಥೆ ಹೆಣೆದು ಈ ಚಿತ್ರ ನಿರ್ದೇಶಿಸಿದ್ದಾರೆ. ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳದಲ್ಲಿ ಇದು ನಿರ್ಮಾಣವಾಗಿದೆ. ತೆಲುಗಿನಲ್ಲಿ ‘ಅರುಂಧತಿ’ ಮತ್ತು ‘ಭಾಗಮತಿ’ ಹೊಸ ಅಲೆ ಸೃಷ್ಟಿಸಿದ ಸಿನಿಮಾಗಳಾಗಿವೆ. ಕನ್ನಡದಲ್ಲಿ ಈ ಮಾದರಿಯ ಸಿನಿಮಾಗಳು ನಿರ್ಮಾಣವಾಗಿಲ್ಲ. ಆ ನಿರ್ವಾತವನ್ನು ‘ದಮಯಂತಿ’ ತುಂಬಿದೆ ಎಂಬುದು ಚಿತ್ರತಂಡದ ವಿವರಣೆ.

ಹಾರರ್, ಥ್ರಿಲ್ಲರ್ ಹಾಗೂ ಕಾಮಿಡಿ ಚಿತ್ರ ಇದು. ಎರಡು ಕಾಲಘಟ್ಟದಲ್ಲಿ ಕಥೆ ಸಾಗಲಿದೆಯಂತೆ. ಹರಡಿದ ಕೂದಲು, ಕಣ್ಣಿಗೆ ಕಾಡಿಗೆ, ಮೈತುಂಬ ಒಡವೆ ಹೀಗೆ ಭಿನ್ನ ಗೆಟಪ್‌ನಲ್ಲಿ ರಾಧಿಕಾ ನಟಿಸಿದ್ದಾರೆ. ರಾಜ ಮನೆತನದ ರಾಣಿಯಾಗಿಯೂ ಅವರು ಕಾಣಿಸಿಕೊಂಡಿದ್ದಾರೆ ಎನ್ನುವುದು ಚಿತ್ರತಂಡದ ಹೇಳಿಕೆ.

ಚಿತ್ರಕ್ಕೆ ಸಂಗೀತ ಸಂಯೋಜಿಸಿರುವುದು ಆರ್.ಎಸ್. ಗಣೇಶ್ ನಾರಾಯಣ್. ಪಿ.ಕೆ.ಎಚ್. ದಾಸ್ ಅವರ ಛಾಯಾಗ್ರಹಣವಿದೆ. ಶ್ರೀಲಕ್ಷ್ಮಿ ವೃಷಾದ್ರಿ ಪ್ರೊಡಕ್ಷನ್ಸ್ ಲಾಂಛನದಡಿ ಬಂಡವಾಳ ಹೂಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)