ಬೆಂಗಳೂರು: ನಟ ದರ್ಶನ್ ಅಭಿಮಾನಿಗಳದ್ದು ಎನ್ನಲಾದ ಅಶ್ಲೀಲ ಸಂದೇಶಗಳು, ಬೆದರಿಕೆಗಳು ಸದ್ಯ ಸ್ಯಾಂಡಲ್ವುಡ್ನಲ್ಲಿ ಮತ್ತೆ ದೊಡ್ಡ ಸದ್ದು ಮಾಡಿದೆ.

ಆರೋಪ–ಪ್ರತ್ಯಾರೋಪಗಳು ಮುಂದುವರೆದಿವೆ. ಏತನ್ಮಧ್ಯೆ ನಟ ಪ್ರಥಮ್ ಅವರು 'ನಾಳೆ ದೊಡ್ಡದಾಗಿ ಅಗುತ್ತೆ! ತುಂಬಾ ದೊಡ್ಡ ನಿರ್ಧಾರ!' ಎಂದು ದರ್ಶನ್ ಅಭಿಮಾನಿಗಳನ್ನು ಉದ್ದೇಶಿಸಿ ಹೇಳಿದ್ದಾರೆ.

'ನಾಳೆ ದೊಡ್ಡದಾಗಿ ಅಗುತ್ತೆ! ತುಂಬಾ ದೊಡ್ಡ ನಿರ್ಧಾರ! ನೀವೆಲ್ಲರೂ ನೀವು ಇಷ್ಟ ಪಡೋ ನಟರನ್ನ ಬೀದಿಗೆ ನಿಲ್ಲಿಸ್ತಾ ಇದೀರಾ! ನಾಳೆ ನೋಡ್ತೀರಿ ಏನಾಗುತ್ತೆ ಅಂತ! D company, fans pages ನಿಮ್ಗೇನೂ ಪ್ರಾಬ್ಲಮ್ ಇರಲ್ಲ ಆರಾಮಾಗಿರಿ! ನಾಳೆ ಏನೋ ಆಗುತ್ತೆ ಕಾಯ್ತಿರಿ, ನಿಮ್ಮ ಹೀರೋನ ನೀವೇ ಬೀದಿಗೆ ತರ್ತಾ ಇದೀರಾ! ನಾಳೆವರೆಗೆ ಕಾಯಿರಿ' ಎಂದು ಎಚ್ಚರಿಕೆಯ ಸಂದೇಶವನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರೆ ಆರು ಆರೋಪಿಗಳಿಗೆ ಜಾಮೀನು ನೀಡಿರುವ ಕರ್ನಾಟಕ ಹೈಕೋರ್ಟ್ ಕ್ರಮಕ್ಕೆ ಸುಪ್ರೀಂ ಕೋರ್ಟ್ ಕಳೆದ ಜುಲೈ 23ರಂದು ಛೀಮಾರಿ ಹಾಕಿತ್ತು.

ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಆರ್.ಮಹಾದೇವನ್ ಅವರ ಪೀಠವು ತೀರ್ಪು ಕಾಯ್ದಿರಿಸಿದೆ. ನಾಳೆ ಅಥವಾ ಈ ವಾರ ತೀರ್ಪು ಬರುವ ಸಂಭವ ಇರುವ ಹಿನ್ನೆಲೆಯಲ್ಲಿ ಪ್ರಥಮ್ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ.

‘ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಸಂದೇಶಗಳನ್ನು ಪ್ರಕಟಿಸಲಾಗುತ್ತಿದೆ. ಇದರಿಂದ ಮಹಿಳೆಯರ ಸ್ಥಾನಮಾನಕ್ಕೆ ಧಕ್ಕೆ ಆಗುತ್ತಿದೆ’ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಕ್ರಮವಹಿಸಲು ಪೊಲೀಸರಿಗೆ ದೂರು ದಾಖಲಿಸಿದೆ.
.ನಟಿ ರಮ್ಯಾ ಸಿಟ್ಟು: ವಿಜಯಲಕ್ಷ್ಮಿ ದರ್ಶನ್ ಅವರ ಆ ಪೋಸ್ಟ್ ಗುರಿ ಯಾರು?.ರಮ್ಯಾ ವಿರುದ್ಧ ಅಶ್ಲೀಲ ಸಂದೇಶ: ಕ್ರಮಕ್ಕೆ ಆಗ್ರಹಿಸಿ ಗೃಹ ಸಚಿವರಿಗೆ 'FIRE' ಪತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.