ಬೆಂಗಳೂರು: ನಟ ದರ್ಶನ್ ತೂಗುದೀಪ ಅಭಿನಯದ ‘ದಿ ಡೆವಿಲ್’ ಸಿನಿಮಾ ಗುರುವಾರ (ಡಿ.11) ರಾಜ್ಯದಾದ್ಯಂತ ಬಿಡುಗಡೆಯಾಗಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಅಭಿಮಾನಿಗಳ ಜೊತೆಗೆ ಕುಳಿತು ಸಿನಿಮಾ ವೀಕ್ಷಿಸಿ ಸಂಭ್ರಮಿಸಿದ್ದಾರೆ. ಅಲ್ಲದೇ ಚಿತ್ರ ಹಾಗೂ ಪತಿಯ ಅಭಿನಯದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾವುಕ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.

ಪೋಸ್ಟ್ನಲ್ಲಿ ಏನಿದೆ?

‘ಚಿತ್ರಮಂದಿರದಿಂದ ಹೊರಬಂದ ಕ್ಷಣದಲ್ಲೇ ಹೃದಯ ತುಂಬಿ ಹರಿಯಿತು. ನಿರ್ದೇಶಕ ಪ್ರಕಾಶ್ ಅವರ ದೃಷ್ಟಿ, ಕಥನಶೈಲಿ, ಪ್ರತಿಯೊಂದು ಫ್ರೇಮ್ ಮೇಲಿನ ಹಿಡಿತ—ಎಲ್ಲವೂ ವಿಶೇಷ. ಕ್ಯಾಮೆರಾ ಕೆಲಸ ಮತ್ತು ತಾಂತ್ರಿಕ ತಂಡದ ಶ್ರಮದಿಂದ ಚಿತ್ರವು ದೃಶ್ಯಾತ್ಮಕವಾಗಿ ನಿಜವಾದ ಸಿನಿಮಾ ಹಬ್ಬದಂತೆ ಹೊಳೆಯುತ್ತದೆ’.

‘ರಚನಾ ರೈ ಪರದೆ ಮೇಲೆ ಮುದ್ದಾಗಿಯೂ, ಹತ್ತಿರದ ಮನೆಯ ಹುಡುಗಿಯಂತೆಯೂ ಕಾಣಿಸಿಕೊಂಡಿದ್ದಾರೆ. ಅವರ ನೈಸರ್ಗಿಕವಾದ ಆಕರ್ಷಣೆ ಮನಸೂರೆ ಗೊಳಿಸುತ್ತದೆ. ಅವರ ಮುಂದಿನ ಪ್ರಯಾಣ ತುಂಬಾ ಬೆಳಕಿನದ್ದು ಎಂದು ನಂಬುವಷ್ಟು ಸುಂದರ ಅಭಿನಯ. ಶರ್ಮಿಳಾ ಮಾಂಡ್ರೆ ಅವರ ಪಾತ್ರ ಚಿಕ್ಕದಾಗಿದ್ದರೂ, ಅವರು ಪರದೆ ಮೇಲಿನ ಅಂದದಿಂದ ಗಮನ ಸೆಳೆದಿದ್ದಾರೆ‘.

‘ಕಥೆ ಆರಂಭದಿಂದ ಅಂತ್ಯವರೆಗೂ ಹಿಡಿಕೆಯನ್ನು ಬಿಡಲಿಲ್ಲ. ವಿಶೇಷವಾಗಿ ಎರಡು ಪಾತ್ರಗಳ ನಡುವಿನ ಟ್ವಿಸ್ಟ್ಗಳನ್ನು ನಿರ್ದೇಶಕರು ಅದ್ಭುತವಾಗಿ ನಿರ್ವಹಿಸಿದ್ದಾರೆ. ಪ್ರತಿಯೊಬ್ಬ ಕಲಾವಿದ ಮತ್ತು ತಾಂತ್ರಿಕರು ತಮ್ಮ ಹೃದಯದಿಂದ ದುಡಿದಿದ್ದಾರೆ ಎಂಬುದು ಪ್ರತಿಯೊಂದು ದೃಶ್ಯದಲ್ಲೂ ಸ್ಪಷ್ಟವಾಗಿದೆ‘ ಎಂದಿದ್ದಾರೆ.
.VIDEO: ಮಗ ವಿನೀಶ್ ಜೊತೆ ‘ದಿ ಡೆವಿಲ್’ ಸಿನಿಮಾ ವೀಕ್ಷಿಸಿದ ವಿಜಯಲಕ್ಷ್ಮಿ.ಡೆವಿಲ್ ರಿಲೀಸ್: ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ – ವಿಡಿಯೊ ನೋಡಿ.
ದರ್ಶನ್ ಬಗ್ಗೆ ಹೇಳುವುದಾದರೆ…

ಅವರನ್ನು ನೋಡುವಾಗ ನನಗೆ ಏನು ಅನಿಸಿತೋ ಪದಗಳಲ್ಲಿ ಹೇಳಲು ಸಾಧ್ಯವಾಗುವುದಿಲ್ಲ. ಅವರ ಪಾತ್ರಚಿತ್ರಣ, ಅಭಿನಯ, ಹಾಸ್ಯ ಟೈಮಿಂಗ್, ಪರದೆ ಮೇಲೆ ಅವರ ನಟನೆ ಿ.. ಎಲ್ಲವೂ ಜಾದುವಿನಂತೆ ಅನಿಸಿತು. ನಾನು ಬೆರಗಾಗಿದ್ದೆ. ಅವರು ಎರಡು ಪಾತ್ರಗಳನ್ನೂ ಅಷ್ಟು ಸೊಗಸಾಗಿ ಹೊತ್ತೊಯ್ದ ರೀತಿ, ಚಿತ್ರಮಂದಿರದಲ್ಲಿ ಕುಳಿತಿದ್ದ ಪ್ರತಿಯೊಬ್ಬ ಅಭಿಮಾನಿಗೂ ಒಂದು ಅದ್ಭುತ ಅನುಭವ.

ಆದರೆ ಇಂದು ನನ್ನ ಮನಸ್ಸಿಗೆ ಹೆಚ್ಚು ತಾಗಿದ್ದು ನೀವು ಎಲ್ಲರೂ. ನಿಮ್ಮ ಕ್ರೇಜ್, ನಿಮ್ಮ ಕೂಗಾಟ, ದರ್ಶನ್ರ ಮೇಲೆ ನೀವು ತೋರಿಸಿದ ಪ್ರೀತಿ… ಅದನ್ನು ನೋಡಿದಾಗ ನಾನು ಭಾವನೆಗಳನ್ನು ಹಿಡಿದುಕೊಳ್ಳಬೇಕಾಯಿತು. ನಿಮ್ಮ ಈ ಪ್ರೀತಿಯ ಪ್ರತಿಯೊಂದು ಹನಿ ಅವರಿಗೆ ತಲುಪುವಂತೆ ಮಾಡುತ್ತೇನೆ. ಇದೇ ಹುಚ್ಚುತನವನ್ನು ಅವರು ಬೇಗನೇ ಸ್ವತಃ ನೋಡಿ ಅನುಭವಿಸಲಿ ಎಂಬುದು ನನ್ನ ಹಾರೈಕೆ. ವಿಶೇಷವಾಗಿಸಲು ಸಹಕಾರ ಮಾಡಿದ ಎಲ್ಲಾ ಸೆಲೆಬ್ರಿಟಿಸ್ಗಳಿಗೆ ಸಿನಿತಾರೆಯರಿಗೆ ಮತ್ತು ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
.‘ಡೆವಿಲ್’ ಸಿನಿಮಾ ವಿಮರ್ಶೆ: ಕುತೂಹಲ ಉಳಿಸದ ಚಿತ್ರಕಥೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.