ಬೆಂಗಳೂರು: ಮದುವೆ ಸಂಭ್ರಮದಲ್ಲಿರುವ ನವಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರುಆರತಕ್ಷತೆಯ ನಿಮಿತ್ತ ಮುಂಬೈಯಿಂದ ಬೆಂಗಳೂರಿಗೆ ಬಂದಿಳಿದಿದ್ದಾರೆ.
ರಣವೀರ್ ಸಿಂಗ್ ಬಿಳಿ ಬಣ್ಣದ ಕುರ್ತಾ–ಪೈಜಾಮ ಧರಿಸಿದ್ದು, ದೀಪಿಕಾ ಪಡುಕೋಣೆ ತಿಳಿಕೆನೆ ಬಣ್ಣದ ಅನಾರ್ಕಲಿ ಬಟ್ಟೆ ತೊಟ್ಟು ಮಿಂಚುತ್ತಿದ್ದಾರೆ.
ಇವರ ಆರತಕ್ಷತೆ ಕಾರ್ಯಕ್ರಮವು ನಗರದ ಲೀಲಾ ಪ್ಯಾಲೇಸ್‌ನಲ್ಲಿ ನ.21ರಂದು ಜರುಗಲಿದೆ. ಇಲ್ಲಿ ದೀಪಿಕಾ ಪಡುಕೋಣೆಯ ಕುಟುಂಬದಆಪ್ತರು, ಸಂಬಂಧಿಕರಿಗೆ ಮಾತ್ರ ಆಹ್ವಾನ ನೀಡಲಾಗಿದೆ.
ಈ ಜೋಡಿಯ ಮದುವೆ ನ.14, 15ರಂದು ಇಟಲಿಯ ಪ್ರಸಿದ್ಧ ಕೋಮ್ ಸರೋವರದ ಬಳಿಸಿಂಧಿ ಹಾಗೂ ಕೊಂಕಣಿ ಸಂಪ್ರದಾಯದ ಪ್ರಕಾರ ನಡೆದಿತ್ತು.
ಟ್ವಿಟರ್‌ನಲ್ಲಿ ಫೋಟೋ ಹಂಚಿಕೊಂಡ ದೀಪಿಕಾ
ತಮ್ಮ ಮದುವೆ ಸಂಭ್ರಮದ ಕೇವಲ ಎರಡು ಚಿತ್ರಗಳನ್ನು ಮಾತ್ರವೇ ಟ್ವಿಟರ್‌ನಲ್ಲಿ(ನವೆಂಬರ್ 15ರಂದು) ಹರಿಬಿಟ್ಟಿದ್ದ ದೀಪಿಕಾ ಇದೀಗ ಮತ್ತಷ್ಟು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.