ಬುಧವಾರ, ಜೂನ್ 29, 2022
26 °C

ಹೃತಿಕ್‌ ರೋಶನ್‌ 'ಡೆತ್‌ ಬೈ ಚಾಕೊಲೇಟ್‌' ಇದ್ದಂತೆ: ದೀಪಿಕಾ ಪಡುಕೋಣೆ ಟ್ವೀಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಲಿವುಡ್‌ನಲ್ಲಿ ಸಾಕಷ್ಟು ಟ್ರೆಂಡ್‌ ಹುಟ್ಟುಹಾಕಿ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ್ದ ಹೃತಿಕ್‌ ರೋಶನ್‌ ಹಾಗೂ ಟೈಗರ್‌ ಶ್ರಾಫ್‌ ಅಭಿನಯದ ವಾರ್‌ ಸಿನಿಮಾ ದೀಪಿಕಾ ಪಡುಕೋಣೆ ಅವರ ಹೇಳಿಕೆಯಿಂದ ಇದೀಗ ಮತ್ತೊಮ್ಮೆ ಸುದ್ದಿಯಾಗಿದೆ. 

ವಾರ್‌ ಸಿನಿಮಾದಲ್ಲಿನ ಹೃತಿಕ್‌ ರೋಶನ್‌ ಅಭಿನಯಕ್ಕೆ ದೀಪಿಕಾ ಪಡುಕೋಣೆ ಫಿದಾ ಆಗಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು ಹೃತಿಕ್‌ ರೋಶನ್‌ ಕಾರ್ನರ್‌ ಹೌಸ್‌ ಅಂಗಡಿಯಲ್ಲಿರುವ ಡೆತ್‌ ಬೈ ಚಾಕೊಲೇಟ್‌ ಎಂದು ಹೇಳಿದ್ದಾರೆ. 

ಬೆಂಗಳೂರಿನಲ್ಲಿರುವ ಕಾರ್ನರ್‌ ಹೌಸ್‌ ಮಳಿಗೆ ಸಿಹಿ ಕೇಕ್‌ ಮತ್ತು ಐಸ್‌ಕ್ರಿಮ್‌ಗೆ ಸಾಕಷ್ಟು ಪ್ರಸಿದ್ಧಿಯಾಗಿದೆ. ಇಲ್ಲಿ ದೊರೆಯುವ ಡೆತ್‌ ಬೈ ಚಾಕೊಲೇಟ್‌(ಕೇಕ್‌)ನಂತೆ ಹೃತಿಕ್‌ ರೋಶನ್‌ ಎಂದು ದೀಪಿಕಾ ಟ್ವೀಟ್‌ ಮಾಡಿದ್ದಾರೆ. 

ದೀಪಿಕಾ ಟ್ವೀಟ್‌ಗೆ ಹೃತಿಕ್‌ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವಿಬ್ಬರೂ ಒಂದು ಸಿನಿಮಾದಲ್ಲಿ ನಟಿಸಬೇಕು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದಾರೆ.

ರಾಮಾಯಣ ಸಿನಿಮಾದಲ್ಲಿ ಹೃತಿಕ್‌ ಮತ್ತು ದೀಪಿಕಾ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ರಾಮಾಯಣ ಚಿತ್ರತಂಡ ಇದನ್ನು ನಿರಾಕರಿಸಿದೆ. ಈ ಚಿತ್ರದಲ್ಲಿ ಹೃತಿಕ್‌ ರಾಮನ ಪಾತ್ರದಲ್ಲಿ, ದೀಪಿಕಾ ಸೀತೆ ಪಾತ್ರ ಮಾಡಲಿದ್ದಾರೆ ಎನ್ನಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು