ಸಪ್ತಪದಿ ತುಳಿದ ನಟಿ ದೀಪಿಕಾ ಮತ್ತು ರಣವೀರ್ ಸಿಂಗ್‌

7

ಸಪ್ತಪದಿ ತುಳಿದ ನಟಿ ದೀಪಿಕಾ ಮತ್ತು ರಣವೀರ್ ಸಿಂಗ್‌

Published:
Updated:

ಕೊ‌ಮೊ ಸರೋವರ (ಇಟಲಿ): ಬಾಲಿವುಡ್‌ನ ಮುದ್ದಾದ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ವಿವಾಹ ಅದ್ದೂರಿಯಾಗಿ ಇಟಲಿಯಲ್ಲಿ ನೆರವೇರಿತು

ಉತ್ತರ ಇಟಲಿಯ ಕೊ‌ಮೊ ಸರೋವರದ ತೀರದ ಐಷರಾಮಿ ವಿಲ್ಲಾದಲ್ಲಿ ದೀಪಿಕಾ ಮತ್ತು ರಣವೀರ್ ಸಪ್ತಪದಿ ತುಳಿದರು. ಕೊಂಕಣಿ ಮತ್ತು ಸಿಖ್‌ ಸಂಪ್ರದಾಯದಂತೆ ವಿವಾಹ ನೆರವೇರಿತು. ಈ ಅದ್ದೂರಿ ವಿವಾಹಕ್ಕೆ ಎರಡು ಕುಟುಂಬಗಳ ಸದಸ್ಯರು ಮತ್ತು ಆಪ್ತ ಗೆಳೆಯರು ಸಾಕ್ಷಿಯಾದರು. ಕೇವಲ ನೂರು ಜನರಿಗೆ ಮಾತ್ರ ವಿವಾಹಕ್ಕೆ ಆಮಂತ್ರಿಸಲಾಗಿತ್ತು. 

ಕನ್ನಡ ಪರಂಪರೆಯ ಕೊಂಕಣಿ ಶೈಲಿಯಲ್ಲಿ ದೀಪಿಕಾ ಮಿನುಗಿದರೆ, ಸಿಂದಿ ಶೈಲಿಯಲ್ಲಿ ರಣವೀರ್ ಕಂಗೊಳಿದರು. ಇವರಿಬ್ಬರ ವಿವಾಹ ಸಂಭ್ರಮಕ್ಕೆ ಬಾಲಿವುಡ್‌ನ ದಿಗ್ಗಜರಾದ ಶಾರುಕ್‌ ಖಾನ್, ಫರ್ಹಾ ಖಾನ್, ಸಂಜಯ್ ಲೀಲಾ ಬನ್ಸಾಲಿ ಸಾಕ್ಷಿಯಾದರು. 

ಗಣ್ಯರು ಭಾಗವಹಿಸಿದ್ದ ಈ ವಿವಾಹಕ್ಕೆ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿತ್ತು. ಕಳೆದ ಭಾನುವಾರದವರೆಗೆ ಸಾರ್ವಜನಿಕರಿಗೆ ಈ ಪ್ರದೇಶ ಮುಕ್ತವಾಗಿತ್ತು. ನವಜೋಡಿಯ ವಿವಾಹ  ಪೂರ್ಣಗೊಳ್ಳುವವರೆಗೆ ಅಂದಾಜು ನಾಲ್ಕೈದು ದಿನ ಈ ಪ್ರದೇಶಕ್ಕೆ ಸುಳಿಯಲು ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. 

ಕೊಮೊ ಸರೋವರ ಅತ್ಯಂತ ರಮಣೀಯ ಪ್ರಕೃತಿ ಸೌಂದರ್ಯವುಳ್ಳ ಜಾಗ. ಅಲ್ಲಿನ ಅದ್ಬುತ ಸೊಬಗಿನ ಮೇಲೆ ಒಮ್ಮೆ ಕಣ್ಣಾಡಿಸಿದರೆ ಅಥವಾ ಆ ಕುರಿತು ತಿಳಿದರೂ ಅಲ್ಲಿಗೆ ಹೋಗಬೇಕೆನಿಸುತ್ತದೆ. ಹೀಗಾಗಿಯೇ, ದೀಪಿಕಾ ಹಾಗೂ ರಣವೀರ್ ಈ ಪ್ರದೇಶದ ತೀರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 9

  Happy
 • 2

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !