ಶುಕ್ರವಾರ, ನವೆಂಬರ್ 22, 2019
21 °C

ದೀಪಿಕಾ ತಾಯಿಯಾಗುವರೇ? ದೀಪಾವಳಿ ಬಳಿಕ ಸಂಭ್ರಮ ಎಂಬ ಪೋಸ್ಟ್‌ ವೈರಲ್

Published:
Updated:

ಮುಂಬೈ: ನಟಿ ದೀಪಿಕಾ ಪಡುಕೋಣೆ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ದೀಪಿಕಾ ಅಭಿಮಾನಿಗಳು ಸಖತ್‌ ಖುಷಿಯಾಗಿದ್ದಾರೆ!

ಈ ವಿಷಯವನ್ನು ದೀಪಿಕಾ ಪಡುಕೋಣೆ ಇನ್ನು ಖಚಿತಪಡಿಸಿಲ್ಲ. ಆದರೆ ಅವರು ಭಾನುವಾರ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ  ತಾವು ಮಗುವಾಗಿದ್ದಾಗಿನ ಫೋಟೊವನ್ನು ಪೊಸ್ಟ್‌ ಮಾಡಿ 'ದೀಪಾವಳಿ ಬಳಿಕ ಸಂಭ್ರಮ‘ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ ಸಾಕಷ್ಟು ವೈರಲ್‌ ಆಗಿದ್ದು ದೀಪಿಕಾ ತಾಯಿಯಾಗಲಿದ್ದಾರೆ ಎಂಬುದನ್ನು ಖಚಿತಪಡಿಸಿದೆ ಎಂದು ಅವರ ಅಭಿಮಾನಿಗಳು ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. 

 
 
 
 

 
 
 
 
 
 
 
 
 

post diwali celebrations...💤 #diwali

A post shared by Deepika Padukone (@deepikapadukone) on

ದೀಪಿಕಾ ಪೋಸ್ಟ್‌ಗೆ ಅಭಿಮಾನಿಗಳು ಅಭಿನಂದನೆಗಳನ್ನು ಹೇಳುತ್ತಿದ್ದಾರೆ. 

ದೀಪಿಕಾ ಮತ್ತು ಪತಿ ರಣವೀರ್ ಅವರು ಕಳೆದ ಮಾರ್ಚ್‌ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಸೆರೆಸಿಕ್ಕ ದೃಶ್ಯಾವಳಿಯೊಂದರ ಪ್ರಕಾರ ದೀಪಿಕಾ ಅವರು ಗರ್ಭಿಣಿ ಎಂದು ಆಗಲೇ ಸುದ್ದಿಯೊಂದು ವೈರಲ್‌ ಆಗಿತ್ತು. 

ದೀಪಿಕಾ ಈ ಹಿಂದೆ ಹಲವು ಸಲ ತಮ್ಮ ಬಾಲ್ಯದ ಚಿತ್ರಗಳು ಹಾಗೂ ಮಕ್ಕಳ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದರು. ಬಾಲಿವುಡ್‌ನ ಈ ಜೋಡಿ ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿರಿಸಿತ್ತು.

ಪ್ರತಿಕ್ರಿಯಿಸಿ (+)