ನವದೆಹಲಿ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಪ್ಯಾರಿಸ್ ಫ್ಯಾಷನ್ ವೀಕ್ನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸ್ಕೂಟರ್ನಲ್ಲಿ ಪ್ಯಾರಿಸ್ ನಗರವನ್ನು ಸುತ್ತಿದ್ದಾರೆ.

ಇದರ ವಿಡಿಯೊವನ್ನು ದೀಪಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ಜಗತ್ತೇ ನಿನ್ನದು’ ಎಂದು ವಿಡಿಯೊಗೆ ಕ್ಯಾಪ್ಶನ್ ನೀಡಿರುವ ದೀಪಿಕಾ, ಪ್ಯಾರಿಸ್ನಲ್ಲಿರುವ ಅಭಿಮಾನಿಗಳೊಂದಿಗೆ ಸಮಯ ಕಳೆದ ದೃಶ್ಯಗಳನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ

‘ನಾನು 11 ಮತ್ತು 12ನೇ ತರಗತಿಯನ್ನು ಫ್ರೆಂಚ್ ಭಾಷೆಯಲ್ಲೇ ಕಲಿತಿದ್ದೇನೆ. ಹೀಗಾಗಿ ಆಗ ನನ್ನ ಫ್ರೆಂಚ್ ಭಾಷೆ ಉತ್ತಮವಾಗಿತ್ತು’ ಎಂದಿದ್ದಾರೆ.

ಸ್ಕೂಟಿಯಲ್ಲಿ ಪ್ಯಾರಿಸ್ನ ವಿವಿಧ ಜಾಗಗಳಿಗೆ ಭೇಟಿ ನೀಡಿದ, ಫೋಟೊಶೂಟ್ ಮಾಡಿಸಿಕೊಂಡಿರುವ, ಪ್ರಸಿದ್ಧ ಐಫಲ್ ಟವರ್ ಬಳಿ ನಿಂತು ಫೋಟೊಗೆ ಪೋಸ್ ನೀಡಿರುವ ದೃಶ್ಯಗಳನ್ನು ದೀಪಿಕಾ ವಿಡಿಯೊದಲ್ಲಿ ಹಂಚಿಕೊಂಡಿದ್ದಾರೆ.

ಮಾರ್ಚ್ 3 ರಿಂದ 11ರವರೆಗೆ ಪ್ಯಾರಿಸ್ ಫ್ಯಾಶನ್ ವೀಕ್ 2025 ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.