ತೆಲುಗಿನ ಪ್ರಭಾಸ್ ನಟನೆಯ 21ನೇ ಸಿನಿಮಾಕ್ಕೆ ನಿರ್ದೇಶಕ ನಾಗ್ ಅಶ್ವಿನ್ ಆ್ಯಕ್ಷನ್ ಕಟ್ ಹೇಳುತ್ತಿರುವುದು ಹಳೆಯ ಸುದ್ದಿ. ಈ ಸಿನಿಮಾದ ಚಿತ್ರಕಥೆಯೂ ಅಷ್ಟೇ ಕುತೂಹಲಕಾರಿಯಾಗಿದೆ. ವಿಜ್ಞಾನದ ಕಥೆ ಆಧಾರಿತ ಚಿತ್ರ ಇದು.

ಇದರಲ್ಲಿ ಪ್ರಭಾಸ್ ಜೊತೆಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ರೊಮ್ಯಾನ್ಸ್ ಮಾಡಲಿದ್ದಾರೆ ಎಂಬ ಸುದ್ದಿಯಿತ್ತು. ಕೊನೆಗೆ, ದುಬಾರಿ ಸಂಭಾವನೆ ಕೇಳಿದ್ದರಿಂದ ಆಕೆಯ ಬದಲಿಗೆ ಬಿ ಟೌನ್ನ ಮತ್ತೊಬ್ಬ ಬೆಡಗಿ ಕಿಯಾರಾ ಅಡ್ವಾಣಿಯನ್ನು ಕರೆತರಲು ಚಿತ್ರತಂಡ ನಿರ್ಧರಿಸಿದೆ ಎಂಬ ಸುದ್ದಿಯೂ ಹರಿದಾಡಿತ್ತು.

ಆದರೆ, ದೀಪಿಕಾ ಪಡುಕೋಣೆ ಅವರೇ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಈಗ ಟಾಲಿವುಡ್ ಅಂಗಳದಿಂದ ತೇಲಿಬಂದಿದೆ. ದೀಪಿಕಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ‘ಮಹಾನಟಿ’ ಚಿತ್ರದ ಪೋಸ್ಟರ್ ಹಂಚಿಕೊಂಡಿರುವುದು ಈ ಸುದ್ದಿಗೆ ಪುಷ್ಟಿ ನೀಡಿದೆ. ಜೊತೆಗೆ, ಈ ಪೋಸ್ಟರನ್ನು ಅವರು ನಾಗ್ ಅಶ್ವಿನ್ಗೂ ಟ್ಯಾಗ್ ಮಾಡಿದ್ದಾರೆ.

ಪ್ರಸ್ತುತ ದೀಪಿಕಾ ಮತ್ತು ರಣವೀರ್ ಸಿಂಗ್ ಸೆಲ್ಪ್ ಕ್ವಾರಂಟೈನ್ನಲ್ಲಿದ್ದಾರೆ. ಇತ್ತೀಚೆಗೆ ದೀಪಿಕಾ ತೆಲುಗಿನ ‘ಮಹಾನಟಿ’ ಸಿನಿಮಾವನ್ನು ವೀಕ್ಷಿಸಿದರಂತೆ. ಇದನ್ನು ನಿರ್ದೇಶಿಸಿದ್ದು ನಾಗ್ ಅಶ್ವಿನ್. ನಟಿ ಸಾವಿತ್ರಿ ಅವರ ಜೀವನಾಧಾರಿತ ಚಿತ್ರ ಇದು. ಇದರಲ್ಲಿನ ಅಮೋಘ ನಟನೆಗಾಗಿ ರಾಷ್ಟ್ರಪ್ರಶಸ್ತಿಯು ಕೀರ್ತಿ ಸುರೇಶ್ ಅವರ ಮುಡಿಗೇರಿತ್ತು.

ದೀಪಿಕಾ ‘ಮಹಾನಟಿ’ ಸಿನಿಮಾ ವೀಕ್ಷಿಸಿ ಸುಮ್ಮನಾಗಿಲ್ಲ. ಎಲ್ಲರೂ ಇದನ್ನು ನೋಡಬೇಕು ಎಂಬ ಸಲಹೆಯನ್ನೂ ನೀಡಿದ್ದಾರೆ. ಆ ಮೂಲಕ ತಾವು ಪ್ರಭಾಸ್ ನಟನೆಯ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿಯನ್ನು ಅವರೇ ಪರೋಕ್ಷವಾಗಿ ಸೋರಿಕೆ ಮಾಡಿದ್ದಾರೆ ಎಂಬುದು ಪ್ರಭಾಸ್ ಅಭಿಮಾನಿಗಳ ಲೆಕ್ಕಾಚಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.