ಮುಂಬೈ: ಬಾಲಿವುಡ್‌ನಲ್ಲಿ ತಯಾರಾಗುತ್ತಿರುವ ಟೀಂ ಇಂಡಿಯಾದಮಾಜಿ ನಾಯಕ ಕಪಿಲ್ ದೇವ್ ಅವರ ಜೀವನಾಧಾರಿತ ಸಿನಿಮಾ ‘83’ ಚಿತ್ರದಲ್ಲಿ ಕಪಿಲ್ ದೇವ್ ಆಗಿ ರಣವೀರ್ ಸಿಂಗ್ ಮತ್ತು ರೋಮಿ ದೇವ್ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳುತ್ತಿರುವುದು ಹಳೇ ವಿಚಾರ. ಈ ಹಿಂದೆ ಸಿನಿಮಾದ ಫಸ್ಟ್‌ಲುಕ್ ರಿಲೀಸ್ ಆದಾಗ, ರಣವೀರ್ ಸಿಂಗ್ ಕಪಿಲ್ ದೇವ್‌ರಂತೆಯೇಕಾಣಿಸಿಕೊಂಡಿದ್ದರು.

ಅದಾದ ಬಳಿಕ ಅಭಿಮಾನಿಗಳು ದೀಪಿಕಾ ಪಡುಕೋಣೆ ಹೇಗೆ ಕಾಣಿಸಬಹುದು ಎಂದು ಕಾಯುತ್ತಿದ್ದರು. ಅದರಂತೆ ಇದೀಗ ರೋಮಿ ದೇವ್ ಪಾತ್ರದಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.ರೋಮಿ ದೇವ್ ಆಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ.

ಈ ಕುರಿತು ದೀಪಿಕಾ ಚಿತ್ರದ ಫಸ್ಟ್‌ಲುಕ್ ಅನ್ನು ಶೇರ್ ಮಾಡಿಕೊಂಡಿದ್ದು, ರಣವೀರ್ ಸಿಂಗ್ ಅವರೊಂದಿಗೆ ಬಾಬ್ ಕಟ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಣವೀರ್ಟೀಮ್ ಬ್ಲೇಜರ್ ಧರಿಸಿದ್ದರೆ, ದೀಪಿಕಾ ಕಪ್ಪು ಮತ್ತು ಕ್ರೀಮ್ ಕಲರ್ ಬಟ್ಟೆಧರಿಸಿದ್ದಾರೆ. ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾದಂಪತಿ ನಗುತ್ತಿದ್ದಾರೆ.

ಫೋಟೊವನ್ನು ಹಂಚಿಕೊಂಡಿರುವ ಅವರು, 'ಕ್ರೀಡಾ ಇತಿಹಾಸದಲ್ಲಿ ಅತ್ಯಂತ ಅಪ್ರತಿಮ ಕ್ಷಣಗಳನ್ನು ಸೆರೆ ಹಿಡಿಯುವ ಚಲನಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಲು ಸಾಧ್ಯವಾಗುವುದು ಒಂದು ಗೌರವ. ಪತಿಯ ವೃತ್ತಿ ಜೀವನ ಮತ್ತು ವೈಯಕ್ತಿಕ ಆಕಾಂಕ್ಷೆಗಳ ಯಶಸ್ಸಿನಲ್ಲಿ ಹೆಂಡತಿ ವಹಿಸುವ ಪಾತ್ರವನ್ನು ನನ್ನ ತಾಯಿಯಲ್ಲೇ ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ‘83‘ ಸಿನಿಮಾವು ನನಗೆ ಹಲವಾರು ವಿಧಗಳಲ್ಲಿ ತನಗಿಂತಲೂ ತನ್ನ ಗಂಡನ ಕನಸನ್ನು ಸಾಕಾರಗೊಳಿಸುವ ಪ್ರತಿ ಮಹಿಳೆಯರ ಕಾವ್ಯದಂತೆ ಕಾಣಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

ಸಾಕಿಬ್ ಸಲೀಮ್, ತಾಹಿರ್ ರಾಜ್ ಭಾಸಿನ್, ಅಮ್ಮಿ ವಿರ್ಕ್, ಹಾರ್ದಿ ಸಂಧು, ಚಿರಾಗ್ ಪಾಟಿಲ್, ಜತಿನ್ ಸರ್ನಾ, ಜಿವಾ, ಧೈರ್ಯ ಕರ್ವಾ, ಆರ್ ಬದ್ರೀ, ಅಧಿನಾಥ್ ಕೊತಾರೆ ಮತ್ತು ನಿಶಾಂತ್ ದಹಿಯಾ ಸೇರಿದಂತೆ ಸುಮಾರು 83 ಜನರು ನಟಿಸಿದ್ದಾರೆ. ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿರುವ ಈ ಎಲ್ಲ ನಟರ ಫಸ್ಟ್ ಲುಕ್ ಪೋಸ್ಟರ್‌ಗಳು ಇತ್ತೀಚೆಗೆಬಹಿರಂಗಗೊಂಡಿದ್ದವು.

ಇದಲ್ಲದೆ ಪಂಕಜ್ ತ್ರಿಪಾಠಿ ಮತ್ತು ಬೊಮನ್ ಇರಾನಿ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಬೀರ್ ಖಾನ್ ನಿರ್ದೇಶನ ಮಾಡಿರುವ ಈ ಸಿನಿಮಾಏಪ್ರಿಲ್ 10ಕ್ಕೆಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.