ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಟೆಕ್ಟಿವ್ ತೀಕ್ಷ್ಣ ಟ್ರೇಲರ್‌ ಬಿಡುಗಡೆ: ‘ಗಂಡನಿಗೆ ಹೆಂಡ್ತಿಯೇ ಪತ್ತೆದಾರಿ‘

Published 17 ಸೆಪ್ಟೆಂಬರ್ 2023, 19:50 IST
Last Updated 17 ಸೆಪ್ಟೆಂಬರ್ 2023, 19:50 IST
ಅಕ್ಷರ ಗಾತ್ರ

‘ಗಂಡನ ಪಾಲಿಗೆ ಹೆಂಡ್ತಿಯೇ ಪತ್ತೆದಾರಿ. ಎಲ್ಲ ಮಹಿಳೆಯರೊಳಗೊಂದು ಪತ್ತೆದಾರಿ ಪಾತ್ರವಿರುತ್ತದೆ. ನಮ್ಮ ಮನೆಯವರಲ್ಲಿ ಇದು ತುಸು ಹೆಚ್ಚಾಗಿಯೇ ಇದೆ’ ಎಂದು ಸಭೀಕರನ್ನು ನಗಿಸಿದರು ನಟ ಉಪೇಂದ್ರ.

ಉಪೇಂದ್ರ ಅವರು ಪತ್ನಿ ಕುರಿತಾಗಿ ಹೊಗಳಲು, ದೂರಲು ವೇದಿಕೆಯಾಗಿದ್ದು ಪ್ರಿಯಾಂಕ ಉಪೇಂದ್ರ ಅಭಿನಯದ ‘ಡಿಟೆಕ್ಟಿವ್ ತೀಕ್ಷ್ಣ’ ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭ. ಪ್ರಿಯಾಂಕ ಅವರ 50ನೇ ಚಿತ್ರಕ್ಕೆ ನಿರ್ದೇಶಕ ತ್ರಿವಿಕ್ರಮ ರಘು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

‘ಪ್ರಿಯಾಂಕ 50 ನೇ ಚಿತ್ರದಲ್ಲಿದ್ದಾರೆ. ನಾನಿನ್ನೂ 46 ರಲ್ಲಿಯೇ ಇದ್ದೇನೆ. ಪ್ರಿಯಾಂಕ ಒಟ್ಟಿಗೆ 100 ಸಿನಿಮಾಗಳಿಗೆ ಒಮ್ಮೆಲೆ ಸಹಿ ಹಾಕುವ ಮಟ್ಟಿಗೆ ಈ ಸಿನಿಮಾ ಯಶಸ್ವಿಯಾಗಲಿ’ ಎಂದು ರಿಯಲ್‌ಸ್ಟಾರ್‌ ಉಪೇಂದ್ರ ಪತ್ನಿಗೆ ಶುಭ ಹಾರೈಸಿದರು.

ಗುತ್ತ ಮುನಿಪ್ರಸನ್ನ, ಮುನಿವೆಂಕಟ್ ಚರಣ್ ಮತ್ತು ಪುರುಷೋತ್ತಮ್.ಬಿ.ಕೊಯೂರು ಬಂಡವಾಳ ಹೂಡಿರುವ ಚಿತ್ರದಲ್ಲಿ ಕಿರುತೆರೆ ನಟ ವಿಜಯ್‌ಸೂರ್ಯ ತನಿಖೆಗೆ ಸಹಾಯ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಿ.ರೋಹಿತ್ ಅವರ ಸಂಗೀತ, ಮನುದಾಸಪ್ಪ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT