ಬೆಂಗಳೂರು: ಶಾಜಿಯಾ ಇಕ್ಬಾಲ್ ಅವರ ಮೊದಲ ಸಿನಿಮಾವಾಗಿ ಬರುತ್ತಿರುವ ‘ಧಡಕ್–2’ ಬಿಡುಗಡೆಗೆ ಸಿದ್ಧವಾಗಿದ್ದು ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ.

ಧಡಕ್–2ನಲ್ಲಿ ಸಿದ್ಧಾಂತ್ ಚತುರ್ವೇಧಿ ಹಾಗೂ ತೃಪ್ತಿ ದಿಮ್ರಿ ಕಾಲೇಜು ಪ್ರೇಮಿಗಳಾಗಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. 2018 ರಲ್ಲಿ ಬಿಡುಗಡೆಯಾಗಿದ್ದ ಜಾಹ್ನವಿ ಕಪೂರ್– ಇಶಾನ್ ಖಟ್ಟೇರ್ ಅವರ ಧಡಕ್ ಸಿನಿಮಾದಂತೆ ಕಥಾ ಹಂದರವನ್ನು ಈ ಸಿನಿಮಾ ಒಳಗೊಂಡಿದ್ದು ಟ್ರೇಲರ್ ಗಮನ ಸೆಳೆದಿದೆ.

ಜಾತಿ ಸಂಘರ್ಷದ ನಡುವೆ ಸೆಣಸುವ ಕಾಲೇಜು ಪ್ರೇಮಿಗಳ ಬಗ್ಗೆ ಧಡಕ್–2 ಕಥೆ ಹೇಳುತ್ತದೆ. ಜೀ ಸ್ಟುಡಿಯೋ ಹಾಗೂ ‘ಧರ್ಮಾ‘ ಪ್ರೊಡಕ್ಷನ್ ಅಡಿಯಲ್ಲಿ ಕರಣ್ ಜೋಹರ್ ಇನ್ನಿತರರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ವಿಶೇಷ ಎಂದರೆ ಖ್ಯಾತ ಔಷಧ ಉದ್ಯಮಿ ಆಧಾರ್ ಪೂನಾವಾಲಾ ಅವರೂ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ ಎನ್ನಲಾಗಿದೆ.

ಕೆಲ ಶಾರ್ಟ್ ಫಿಲ್ಮ್ಗಳನ್ನು ನಿರ್ದೇಶಿಸಿ ಗುರುತಿಸಿಕೊಂಡಿದ್ದ ಶಾಜಿಯಾ ಇಕ್ಬಾಲ್ ಅವರು ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ. ಅವರು ಜಾಹೀರಾತು ಉದ್ಯಮದಿಂದ ಬಂದವರಾಗಿದ್ದಾರೆ.

2018ರಲ್ಲಿ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆದಿದ್ದ ಕಧೀರ್ ನಟನೆಯ ‘ಪಾರಿಯೂರ್ ಪೆರುಮಾಳ್’ ಸಿನಿಮಾ ಆಧರಿಸಿ ಧಡಕ್–2 ಬರುತ್ತಿದೆ. ಈ ಸಿನಿಮಾ ಇದೇ ಆಗಸ್ಟ್ 1 ರಂದು ಹಿಂದಿಯಲ್ಲಿ ಬಿಡುಗಡೆಯಾಗಲಿದೆ.
.ಅಸ್ಸಾಂ ಮೂಲದ ಈ ಚೆಲುವೆ ಅಮೆರಿಕದಲ್ಲಿ ಪೋರ್ನ್ ಇಂಡಸ್ಟ್ರಿಗೆ ಎಂಟ್ರಿಯಾದರೇ?.‘ಕೆಡಿ’ ಸಿನಿಮಾದ ಟೀಸರ್ ಬಿಡುಗಡೆ: ಗಮನ ಸೆಳೆದ ಶಿಲ್ಪಾ ಶೆಟ್ಟಿ, ರಮೇಶ್ ಪಾತ್ರಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.