ತಮಿಳಿನ ನಟ ಧನುಷ್ ಹಾಗೂ ನಿರ್ದೇಶಕ ಮರಿ ಸೆಲ್ವರಾಜ್ ಸಿನಿಮಾ ಎಂದರೆ ಸಹಜವಾಗಿ ಕುತೂಹಲ ಹೆಚ್ಚುತ್ತದೆ. ಈ ಜೋಡಿ ‘ಕರ್ಣನ್’ ಚಿತ್ರದಿಂದ ಬಲು ಜನಪ್ರಿಯವಾಗಿತ್ತು. ಇದೀಗ ಮತ್ತೊಂದು ಸಿನಿಮಾದಲ್ಲಿ ಇಬ್ಬರು ಒಂದಾಗಿರುವುದು ಖಚಿತವಾಗಿದ್ದು, ಈ ವರ್ಷ ಸೆಪ್ಟೆಂಬರ್ನಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.

ಧನುಷ್ ಅವರ 56ನೇ ಚಿತ್ರ ಇದಾಗಿದ್ದು, ಕಾಲ್ಪನಿಕ ಕಥೆಯ ಜತೆಗೆ ಇತಿಹಾಸ, ರಾಜಕೀಯದ ಅಂಶಗಳು ಈ ಚಿತ್ರದಲ್ಲಿವೆ ಎಂಬುದು ಗೊತ್ತಾಗಿದೆ. ಈ ಬಗ್ಗೆ ತಮಿಳಿನ ಮಾಧ್ಯಮಗಳ ಜತೆ ಮಾತನಾಡಿರುವ ಮರಿ ಸೆಲ್ವರಾಜ್, ‘ಇದು ನನ್ನ ವೃತ್ತಿ ಜೀವನದ ಅತಿ ದೊಡ್ಡ ಸಿನಿಮಾ. ಇದು ನಮ್ಮಿಬ್ಬರ ವೃತ್ತಿ ಜೀವನದ ಅತಿ ದೊಡ್ಡ ಸಿನಿಮಾವಾಗಬೇಕೆಂದು ಧನುಷ್ ಹೇಳಿದ್ದರು. ಹೀಗಾಗಿ ನನ್ನ ಹಿಂದಿನ ಸಿನಿಮಾಗಳಿಗಿಂತ ಭಿನ್ನವಾಗಿರುವುದನ್ನು ಈ ಸಿನಿಮಾದಲ್ಲಿ ಯತ್ನಿಸುತ್ತಿರುವೆ’ ಎಂದಿದ್ದಾರೆ.

ಸದ್ಯ ಧನುಷ್ ‘ಅಮರನ್’ ಚಿತ್ರ ನಿರ್ದೇಶಕ ರಾಜ್ಕುಮಾರ್ ಪೆರಿಯಸಾಮಿ ಜತೆ ‘ಡಿ55’ ಚಿತ್ರದ ಚಿತ್ರೀಕರಣದಲ್ಲಿ ಮಗ್ನರಾಗಿದ್ದಾರೆ. ಈ ಚಿತ್ರ ಪೂರ್ಣಗೊಂಡ ಬಳಿಕ ಮರಿ ಸೆಲ್ವರಾಜ್ ನಿರ್ದೇಶನದ ಚಿತ್ರ ಪ್ರಾರಂಭವಾಗಲಿದೆ. ಈ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತವಿರಲಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.